alex Certify ವೃದ್ಧಾಪ್ಯದಲ್ಲೂ ಜೀವನೋತ್ಸಾಹ; ಮ್ಯಾಚಿಂಗ್ ಔಟ್ ಫಿಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧಾಪ್ಯದಲ್ಲೂ ಜೀವನೋತ್ಸಾಹ; ಮ್ಯಾಚಿಂಗ್ ಔಟ್ ಫಿಟ್

This Elderly Japanese Couple in Matching Outfits is Giving Major Relationship Goals

ವರ್ಷ ಅರವತ್ತಾಗುತ್ತಿದ್ದಂತೆ ಎಲ್ಲವೂ ಮುಗಿಯಿತು ಎಂದು ಜೀವನೋತ್ಸಾಹ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚು. ಆದರೆ ಇಲ್ಲೊಂದು ಜೋಡಿ ಜೀವನೋತ್ಸಾಹದ ಭಾಗವಾಗಿ ಮ್ಯಾಚಿಂಗ್ ಔಟ್ ಫಿಟ್ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ.

ಮದುವೆಯಾಗಿ 41 ವರ್ಷಗಳನ್ನು ಕಳೆದಿರುವ ಜಪಾನಿನ ತ್ಸುಯೋಶಿ ಮತ್ತು ಟೋಮಿ ಸೆಕಿ ‘ಬಾನ್’ ಮತ್ತು ‘ಪಾನ್’ ಎಂದೇ ಖ್ಯಾತರಾಗಿದ್ದಾರೆ. ಅವರ ಫೋಟೊಗಳು ಅಂತರ್ಜಾಲದಲ್ಲಿ‌ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ವೃದ್ಧಾಪ್ಯದಲ್ಲೂ ಅತ್ಯಂತ ಮುದ್ದುಮುದ್ದಾಗಿ ಕಾಣುವ ಜೋಡಿ ತಾವು ತೊಡುವ ಒಂದೇ ರೀತಿ ಬಟ್ಟೆಯಿಂದ ಖ್ಯಾತಿ ಹೊಂದಿದ್ದಾರೆ.

ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ ಕಮಲ್​ಪ್ರೀತ್​ ಕೌರ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

2018ರಲ್ಲಿ ಒಮ್ಮೆ ಒಂದೇ ರೀತಿಯ ಬಟ್ಟೆ ತೊಟ್ಟು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದು ವೈರಲ್ ಆಗಿತ್ತು ಮತ್ತು ಸಾಕಷ್ಟು ಲೈಕ್‌ ಪಡೆಯಿತು. ಅಂದಿನಿಂದ ಇಂದಿನವರೆಗೆ ಈ ಸುಂದರ ಜೋಡಿ ಹಿಂತಿರುಗಿ ನೋಡಲಿಲ್ಲ.

ಹೊಂದಾಣಿಕೆಯ ಬಟ್ಟೆಗಳನ್ನು ಧರಿಸಿ, ತಾವು ಒಟ್ಟಿಗೆ ನಿಂತು, ನಿಯಮಿತವಾಗಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

ಅವರು ಅಗ್ಗದ ಮತ್ತು ಸರಳವಾದ ಬಟ್ಟೆಗಳನ್ನೇ ಧರಿಸುತ್ತಾರೆ. ತಮಾಷೆಯ ಸಂಗತಿಯೆಂದರೆ ಆಕೆ ಮೊದಲು ಹೊಂದಿಕೆಯಾಗುವ ಬಟ್ಟೆ ಧರಿಸುವ ಆಲೋಚನೆ ಇಷ್ಟಪಡಲಿಲ್ಲ. ಮುಜುಗರಕ್ಕೊಳಗಾಗುವ ಆತಂಕವಿತ್ತು.

https://www.instagram.com/p/CR1CJ-jM5sz/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...