ಸಂಬಂಧ ಎಷ್ಟೇ ಗಾಢವಾಗಿದ್ದರೂ ಸಹ ಹಲವು ಸಮಯಗಳು ಕಳೆದ ಬಳಿಕ ಅದರ ತೀವ್ರತೆ, ಆ ಸಂಬಂಧದ ಮೇಲಿನ ಆಕರ್ಷಣೆ ಕಡಿಮೆಯಾಗುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೃದ್ಧ ದಂಪತಿಯ ಜೀವನದಲ್ಲಿ ಈ ಮಾತು ಅಕ್ಷರಶಃ ಸುಳ್ಳಾಗಿದೆ. ವೃದ್ಧ ದಂಪತಿ ಗಿಡಗಳಿಗೆ ನೀರುಣಿಸುವ ಸಂದರ್ಭದಲ್ಲಿ ಮೋಜು ಮಸ್ತಿ ಮಾಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ವಿಡಿಯೋ 1.7 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ.
ಗಿಡಕ್ಕೆ ನೀರುಣಿಸುವ ಸಂದರ್ಭದಲ್ಲಿ ಪತಿಯು ಪತ್ನಿಗೆ ಪೈಪ್ನಿಂದ ನೀರು ಹಾಕಿದರೆ. ಪತ್ನಿಯು ಬಕೆಟ್ನಲ್ಲಿದ್ದ ನೀರನ್ನೇ ಗಂಡನ ಕಡೆಗೆ ಹಾಕಿದ್ದಾಳೆ. ಈ ಮುದ್ದಾದ ಕ್ಷಣವನ್ನು ದೂರದಿಂದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಜಲಯುದ್ಧವನ್ನ ಮೊದಲು ಪತಿ ಆರಂಭಿಸಿದ್ರು, ಆಕೆಯು ನೈಸರ್ಗಿಕವಾಗಿಯೇ ತನ್ನನ್ನು ತಾನು ಬಚಾವ್ ಮಾಡಿಕೊಂಡಿದ್ದಾರೆ. ನಿಮ್ಮನ್ನು ನೀವು ಎಂದಿಗೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.