alex Certify ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಈ ಕಾಯಿಲೆ, 5 ಕೋಟಿ ಜನ ಸಾಯುವ ಆತಂಕ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್‌ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಈ ಕಾಯಿಲೆ,  5 ಕೋಟಿ ಜನ ಸಾಯುವ ಆತಂಕ…..!

ಕೊರೊನಾ ವೈರಸ್‌ ಆರ್ಭಟ ನಿಧಾನವಾಗಿ ಶಾಂತವಾಗ್ತಿದ್ದಂತೆ ಜನರು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಈ ಸಮಾಧಾನ ಹೆಚ್ಚು ದಿನ ಉಳಿಯೋ ಲಕ್ಷಣಗಳಿಲ್ಲ. ಕೋವಿಡ್‌ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ.

ಈ ಕಾಯಿಲೆಯಿಂದ 5 ಕೋಟಿ ಜನರು ಸಾಯುವ ಭೀತಿ ಎದುರಾಗಿದೆ. ತಜ್ಞರು ಇದನ್ನು 1918-1920ರ ಅಪಾಯಕಾರಿ ಸ್ಪ್ಯಾನಿಷ್ ಜ್ವರದೊಂದಿಗೆ ಹೋಲಿಸಿದ್ದಾರೆ. 2020ರಲ್ಲಿ ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿದ್ದ ಕೋವಿಡ್‌ಗೆ 70 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈಗ ಮತ್ತೊಂದು ಸಾಂಕ್ರಾಮಿಕವನ್ನು ಎದುರಿಸುವ ಧೈರ್ಯ ಜನಸಾಮಾನ್ಯರಲ್ಲಿಲ್ಲ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೊನಾ ಈಗಲೂ ಇದೆ. ಅಂಥದ್ರಲ್ಲಿ ಮತ್ತೊಂದು ಭಯಾನಕ ಕಾಯಿಲೆ ಆವರಿಸಿಕೊಳ್ಳುವ ಭೀತಿಯೀಗ ಎದುರಾಗಿದೆ.

‘ವಿಶ್ವ ಆರೋಗ್ಯ ಸಂಸ್ಥೆ’ ಇದಕ್ಕೆ ಡಿಸೀಸ್ ಎಕ್ಸ್ ಎಂದು ಹೆಸರಿಸಿದೆ. WHO ವೈದ್ಯಕೀಯ ತಜ್ಞರು ಈ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ರೋಗ ಬಂದರೆ 20 ಪಟ್ಟು ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ. ಡಿಸೀಸ್‌ ಎಕ್ಸ್‌ನಿಂದ ಸುಮಾರು 5 ಕೋಟಿ ಜನರು ಸಾಯುವ ಭೀತಿ ಎದುರಾಗಿದೆ.

ಬ್ರಿಟನ್‌ನ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್‌ಹ್ಯಾಮ್, ಈ ಸಾಂಕ್ರಾಮಿಕ ರೋಗವು ಕನಿಷ್ಠ 50 ಮಿಲಿಯನ್ ಜನರನ್ನು ಕೊಲ್ಲಬಹುದು ಎಂದು ಅಂದಾಜಿಸಿದ್ದಾರೆ. ನಿಜಕ್ಕೂ ಇದು ಆತಂಕಕಾರಿ ಸಂಗತಿ. ಹಾಗಾಗಿ ಹೊಸ ಕಾಯಿಲೆಯನ್ನು ಎದುರಿಸಲು ಜನಸಾಮಾನ್ಯರು ಸಜ್ಜಾಗಬೇಕು. ಈ ರೋಗದ ಬಗ್ಗೆ ವಿಜ್ಞಾನಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ

ಈ ಸಾಂಕ್ರಾಮಿಕ ರೋಗವು ಎಷ್ಟು ಅಪಾಯಕಾರಿ ಎಂದರೆ ಭೂಮಿಯ ಮೇಲೆ ಒಂದೇ ಒಂದು ವೈರಸ್ ಉಳಿದರೂ ಅದು ದುಪ್ಪಟ್ಟಾಗುತ್ತಲೇ ಹೋಗುತ್ತದೆ. ಈ ವೈರಸ್‌ಗಳು ಬಹಳ ವೇಗವಾಗಿ ರೂಪಾಂತರಗೊಳ್ಳುವುದರಿಂದ ಇದು ಸಂಭವಿಸುತ್ತದೆ. 1918-19ರಲ್ಲಿ ಸ್ಪ್ಯಾನಿಷ್ ಫೀವರ್ ಎಂಬ ಸಾಂಕ್ರಾಮಿಕ ರೋಗವಿತ್ತು. ಅದರಿಂದಾಗಿ ಜಗತ್ತಿನಾದ್ಯಂತ 5 ಕೋಟಿ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಡಿಸೀಸ್‌ ಎಕ್ಸ್‌ ಕೂಡ ಅದನ್ನೇ ಹೋಲುತ್ತದೆ.

X ರೋಗಕ್ಕೆ ಲಸಿಕೆ ಏನು?

ಈ ಡಿಸೀಸ್ ಎಕ್ಸ್ ಬರುವ ಮೊದಲೇ ಬ್ರಿಟಿಷ್ ವಿಜ್ಞಾನಿಗಳು ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಅದಕ್ಕಾಗಿಯೇ ಅವರು ಲಸಿಕೆ ತಯಾರಿಸಲು ಪ್ರಾರಂಭಿಸಿದರು. ಇದಲ್ಲದೆ ಅವರು 25 ರೀತಿಯ ವೈರಸ್‌ಗಳನ್ನು ಸಹ ಅಧ್ಯಯನ ಮಾಡುತ್ತಿದ್ದಾರೆ. ಇದು ಪ್ರಾಣಿಗಳಲ್ಲಿ ಕಂಡುಬರುವ ವೈರಸ್‌ಗಳನ್ನು ಸಹ ಒಳಗೊಂಡಿದೆ. ಇದು ಮನುಷ್ಯರಿಗೂ ಹರಡಬಹುದು. ಏಕೆಂದರೆ ಹವಾಮಾನ ಬದಲಾವಣೆಯಿಂದಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಹಲವಾರು ವೈರಸ್‌ಗಳಿವೆ.

ರೂಪಾಂತರ ಎಂದರೇನು?

ಸರಳ ಭಾಷೆಯಲ್ಲಿ ರೂಪಾಂತರವನ್ನು ಅರ್ಥಮಾಡಿಕೊಂಡರೆ, ಅದನ್ನು ಯಾವುದೇ ಜೀವಿಗಳೊಳಗಿನ ಆನುವಂಶಿಕ ವಸ್ತುವಿನ ಬದಲಾವಣೆಗಳು ಎಂದು ಕರೆಯಲಾಗುತ್ತದೆ. ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹಾದುಹೋದಾಗ, ಅದು ಸ್ವತಃ ಲಕ್ಷಾಂತರ ಪ್ರತಿಗಳನ್ನು ಮಾಡುತ್ತದೆ. ಪ್ರತಿಯೊಂದು ಪ್ರತಿಯು ಇತರ ಪ್ರತಿಗಿಂತ ಭಿನ್ನವಾಗಿರುತ್ತದೆ. ಇದರಿಂದಾಗಿ ಸ್ವಲ್ಪ ಸಮಯದ ನಂತರ ಹೊಸ ತಳಿ ಹೊರಹೊಮ್ಮುತ್ತದೆ. ಅದಕ್ಕಾಗಿಯೇ ವೈರಸ್‌ಗಳು ಯಾವಾಗಲೂ ತಮ್ಮ ವಿಭಿನ್ನ ರೂಪಗಳನ್ನು ಬದಲಾಯಿಸುತ್ತಲೇ ಇರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...