ಟೋಮೋಟೋ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕರು ಟೋಮೋಟೋವನ್ನು ಹೆಚ್ಚಾಗಿ ಬಳಕೆ ಮಾಡ್ತಾರೆ. ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಅತಿಯಾಗಿ ತಿಂದ್ರೆ ಅನಾರೋಗ್ಯ ಕಾಡುತ್ತದೆ.
ಹೆಚ್ಚು ಟೋಮೋಟೋ ತಿನ್ನುವುದರಿಂದ ಗ್ಯಾಸ್ಟ್ರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಎದೆಯುರಿ ಸಮಸ್ಯೆ ಕಾಡುತ್ತದೆ. ಅಜೀರ್ಣ ಸಮಸ್ಯೆಯಿದ್ದರೆ ತಕ್ಷಣ ಟೋಮೋಟೋ ಸೇವನೆ ಬಿಡುವುದು ಒಳ್ಳೆಯದು.
ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿರುವ ಜನರು ಟೋಮೋಟೋದಿಂದ ಸಂಪೂರ್ಣವಾಗಿ ದೂರವಿರಬೇಕು. ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ಮೂತ್ರಪಿಂಡದ ರೋಗಿಗಳಿಗೆ ಹಾನಿಕಾರಕವಾಗಿದೆ.
ಕೀಲು ನೋವು ಇರುವವರು ಟೋಮೋಟೋ ತಿನ್ನಬಾರದು. ಇದು ಕೀಲು ನೋವನ್ನು ಹೆಚ್ಚಿಸುತ್ತದೆ.