alex Certify ಟೀಂ ಇಂಡಿಯಾ ಟಿ 20 ವಿಶ್ವಕಪ್​ ಗೆದ್ದು ಇಂದಿಗೆ 14 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಟಿ 20 ವಿಶ್ವಕಪ್​ ಗೆದ್ದು ಇಂದಿಗೆ 14 ವರ್ಷ

ಬರೋಬ್ಬರಿ 14 ವರ್ಷಗಳ ಹಿಂದೆ ಇದೇ ದಿನ ಎಂಎಸ್​ ಧೋನಿ ನಾಯಕತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ವರ್ಲ್ಡ್​​ ಕಪ್​​ ಪಂದ್ಯದಲ್ಲಿ ಗೆಲುವನ್ನು ಸಾಧಿಸಿತ್ತು. ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ನಡುವಿನ ರೋಚಕ ಕದನವು ಕ್ರಿಕೆಟ್​ ಅಭಿಮಾನಿಗಳನ್ನು ತುದಿಗಾಲಲ್ಲಿ ಕೂರುವಂತೆ ಮಾಡಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟಾಸ್​ ಗೆದ್ದಿದ್ದ ಭಾರತ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು.

ಗಾಯದಿಂದ ಬಳಲುತ್ತಿದ್ದ ವಿರೇಂದ್ರ ಸೆಹ್ವಾಗ್​​ ಈ ಪಂದ್ಯದಿಂದ ಹೊರಗುಳಿದಿದ್ದರು . ಹೀಗಾಗಿ ಯುಸೂಫ್​​ ಪಠಾಣ್​ ಹಾಗೂ ಗೌತಮ್​ ಗಂಭೀರ್​​ ಆರಂಭಿಕ ಬ್ಯಾಟ್ಸ್​ಮನ್​ಗಳಾಗಿ ಕಣಕ್ಕೆ ಇಳಿದಿದ್ದರು. ಯುಸೂಫ್​ ಪಠಾಣ್(15) ಬೌಂಡರಿ ಹಾಗೂ 1 ಸಿಕ್ಸರ್​ ಬಾರಿಸಿ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಡುತ್ತಿರುವಾಗಲೇ ಮೂರನೇ ಓವರ್​ನಲ್ಲಿ ಬೌಲರ್ ಮೊಹಮ್ಮದ್​ ಆಸಿಫ್​ ಅವರನ್ನು ಪೆವಿಲಿಯನ್​ಗೆ ತೆರಳುವಂತೆ ಮಾಡಿದ್ರು.

ರಾಬಿನ್​ ಉತ್ತಪ್ಪ(8) ರನ್​ಗೆ ಔಟ್​ ಆಗುವ ವೇಳೆಗೆ ಭಾರತವು 2 ವಿಕೆಟ್​ ನಷ್ಟಕ್ಕೆ 40 ರನ್​ ಸಂಪಾದಿಸಿತ್ತು. ಬಳಿಕ ರೋಚಕ ಜೊತೆಯಾಟವಾದ ಗೌತಮ್​ ಗಂಭೀರ್​ ಹಾಗೂ ಯುವರಾಜ್​ ಸಿಂಗ್​​ ನಾಲ್ಕನೇ ವಿಕೆಟ್​ ಉರುಳುವ ವೇಳೆಗೆ 63 ರನ್​ ಗಳಿಸಿಕೊಟ್ಟಿದ್ದರು. 54 ಬೌಲ್​​ಗೆ 75 ರನ್​ಗಳನ್ನು ಗಳಿಸಿತು. ಕೊನೆಯಲ್ಲಿ ರೋಹಿತ್​ ಶರ್ಮಾ ಅದ್ಭುತ ಪ್ರದರ್ಶನದಿಂದಾಗಿ ಟೀಂ ಇಂಡಿಯಾ 157/5 ರನ್​ ಸಂಪಾದಿಸಿ ಸಾಂಪ್ರದಾಯಿಕ ಎದುರಾಳಿ ಪಾಕ್​​ಗೆ 158 ರನ್​ಗಳ ಸವಾಲನ್ನು ನೀಡಿತ್ತು.

ಟೀಂ ಇಂಡಿಯಾದ ಸವಾಲನ್ನು ಬೆನ್ನತ್ತಿ ಹೊರಟ ಪಾಕಿಸ್ತಾನ 152 ರನ್​ಗಳನ್ನು ಸಂಪಾದಿಸುವಲ್ಲಿ ಮಾತ್ರ ಸಫಲವಾಯ್ತು. ಈ ಮೂಲಕ ಧೋನಿ ನೇತೃತ್ವದ ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್​​ನ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...