alex Certify ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ನೀವು ಸಂಗೀತ ಪ್ರೇಮಿಯಾಗಿದ್ದರೆ, ಜಾಲತಾಣಗಳಲ್ಲಿ ವೈರಲ್​ ಆಗುವ ಮೆಚ್ಚಿನ ಹಾಡುಗಳನ್ನು ಪದೇ ಪದೇ ಕೇಳುತ್ತಿರುತ್ತೀರಿ. ಅವುಗಳಲ್ಲಿ ಒಂದು ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಐಕಾನಿಕ್ ಸಾಂಗ್ ‌ʼದೀವಾನಾ ಹುವಾ ಬಾದಲ್ʼ ಕೂಡ ಇದ್ದರಲಿಕ್ಕೆ ಸಾಕು.

ಈ ಹಾಡು ಇದೀಗ ಮತ್ತೆ ವೈರಲ್​ ಆಗಿದೆ. ಇದಕ್ಕೆ ಕಾರಣ ಬಾಲಕನೊಬ್ಬ ಈ ಹಾಡನ್ನು ಸುಮಧುರವಾಗಿ ಹಾಡಿದ್ದಾನೆ. ಈತನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈತನ ಧ್ವನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇವನ ಹಾಡು ಕೇಳುತ್ತಿದ್ದರೆ ಮುಖದಲ್ಲಿ ದೊಡ್ಡ ನಗು ಮೂಡುತ್ತದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸಾನಿಗ್ಧ್ ಜೇತ್ವಾ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ, ಸಾನಿಘ್ ಎಂಬ ಬಾಲಕ 1964 ರ ಕಾಶ್ಮೀರ ಕಿ ಕಲಿ ಚಿತ್ರದ ಹಾಡನ್ನು ಹಾಡಿದ್ದಾನೆ. ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...