alex Certify ತಮ್ಮ ಮದುವೆ ದಿನದಂದು ‘ಕುಚ್​ ಕುಚ್​ ಹೋತಾ ಹೈ’ ಕ್ಷಣ ಮರುಸೃಷ್ಟಿಸಿದ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಮದುವೆ ದಿನದಂದು ‘ಕುಚ್​ ಕುಚ್​ ಹೋತಾ ಹೈ’ ಕ್ಷಣ ಮರುಸೃಷ್ಟಿಸಿದ ಜೋಡಿ

ಶಾರುಕ್ ಖಾನ್​ ಅಭಿನಯದ ಕುಚ್​ ಕುಚ್​ ಹೋತಾ ಹೈ‌ ಜನರ ಮನಸ್ಸಿನಿಂದ ಇಂದಿಗೂ ಮಾಸಿಲ್ಲ. ಆ ಚಿತ್ರ ಬಂದು ಬಹಳ ವರ್ಷಗಳು ಕಳೆದರೂ ಅದರಲ್ಲಿನ ಹಾಡುಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಇತ್ತೀಚೆಗಷ್ಟೇ ವಿವಾಹವಾದ ಜೋಡಿಯೊಂದು ಕುಚ್​ ಕುಚ್​ ಹೋತಾ ಹೈ ಯನ್ನು ಮರು ಸೃಷ್ಟಿಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಧು ಇಲ್ಮಾ ಮೊಹಮ್ಮದ್​ ತಾಹಾ ಮತ್ತು ಅವರ ಪತಿ, ಶಾರುಖ್​ ಮತ್ತು ಕಾಜೋಲ್​ ಅವರು ನಟಿಸಿದ್ದ ಪ್ರಮುಖ ದೃಶ್ಯವನ್ನು ಮರುಸೃಷ್ಟಿಸಿದರು. ಈ ದಂಪತಿ ಚಿತ್ರದ ದೊಡ್ಡ ಅಭಿಮಾನಿಯಾಗಿದ್ದಾರೆ, ಆದ್ದರಿಂದ ಅವರು ತಮ್ಮ ವಿಶೇಷ ದಿನದಂದು ಚಲನಚಿತ್ರದ ಕ್ಷಣವನ್ನು ಮರುಸೃಷ್ಟಿಸಲು ನಿರ್ಧರಿಸಿದ್ದರು.

ಚಿತ್ರದಲ್ಲಿ ರಾಹುಲ್​ ಮತ್ತು ಅಂಜಲಿ ಬಾಸ್ಕೆಟ್​ಬಾಲ್​ ಆಡುವ ಸಂದರ್ಭವಿದೆ. ಅದನ್ನು ಇಲ್ಲಿ ಮರು ಸೃಷ್ಟಿಸಿದ್ದಾರೆ. ಬ್ಯಾಸ್ಕೆಟ್​ ಬಾಲ್​ ಅಂಗಣದಲ್ಲೇ ಶೂಟ್​ ಮಾಡಲಾಗಿದ್ದು, ಆ ತುಣುಕನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ 2 ಮಿಲಿಯನ್​ ವೀಕ್ಷಣೆ ಗಳಿಸಿದೆ. ಲೆಹೆಂಗಾ ಮತ್ತು ಸಾಂಪ್ರದಾಯಿಕ ಕುರ್ತಾದಲ್ಲಿರುವ ಜೋಡಿ ಬ್ಯಾಸ್ಕೆಟ್​ಬಾಲ್​ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಾರೆ. ವರನನ್ನು ಬ್ಯಾಸ್ಕೆಟ್​ಗೆ ಬಾಲ್ ಹಾಕಲು ವಧು ತಡೆಯಲು ಪ್ರಯತ್ನಿಸುವ ಸನ್ನಿವೇಶ ಚಿತ್ರೀಕರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...