ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಿಂದ ಈ ರಾಷ್ಟ್ರೀಯ ಕೆಲಸದ ವಾರವನ್ನು ಪಾಲಿಸುವುದು ಎಲ್ಲಾ ಸರ್ಕಾರಿ ಅಂಗಗಳಿಗೂ ಕಡ್ಡಾಯವಾಗಿದ್ದು, ಕೆಲಸ – ಜೀವನದ ನಡುವಿನ ಸಮತೋಲನ ಕಾಯ್ದುಕೊಂಡು, ಆರ್ಥಿಕ ಸ್ಫರ್ಧಾತ್ಮಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಸರ್ಕಾರಿ ಮಾಧ್ಯಮ ತಿಳಿಸಿದೆ.
ಹೊಟೇಲ್ ಊಟದಲ್ಲಿ ಗಂಡಿನ ಗುಪ್ತಾಂಗ ಕಂಡು ಕಕ್ಕಾಬಿಕ್ಕಿಯಾದ ಮಹಿಳೆ…!
“ಜಾಗತಿಕವಾಗಿ ಪಾಲಿಸುವ ಐದು ದಿನಗಳ ಕೆಲಸದ ವಾರದ ಬದಲಿಗೆ ನಾಲ್ಕೂವರೆ ದಿನಗಳ ಕೆಲಸ ವಾರವನ್ನು ಪರಿಚಯಿಸಿದ ಮೊದಲ ದೇಶ ಯುಎಇ,’’ ಎಂದು ಡಬ್ಲ್ಯೂಎಎಂ ಸುದ್ದಿ ಸಂಸ್ಥೆ ತಿಳಿಸಿದೆ.
ಶನಿವಾರ-ಭಾನುವಾರದ ವಾರಾಂತ್ಯವನ್ನು ಹೊಂದಿರುವ ಏಕೈಕ ಅರಬ್ ದೇಶ ಎಂಬ ಹಣೆಪಟ್ಟಿಗೆ ಯುಎಇ ಭಾಜನವಾಗಿದೆ. ವಾರಾಂತ್ಯವು ಶುಕ್ರವಾರ ಮಧ್ಯಾಹ್ನದಿಂದಲೇ ಆರಂಭಗೊಳ್ಳಲಿದೆ. ಶುಕ್ರವಾರ ಇಲ್ಲಿ ಪ್ರಾರ್ಥನೆಯ ದಿನವಾಗಿದೆ.