ಬಗೆ ಬಗೆಯ ಚಟ್ನಿ ರುಚಿ ಎಲ್ಲರೂ ಸವಿದಿರುತ್ತೀರಿ. ಆದರೆ ಈ ಹೊಸ ರೀತಿಯಲ್ಲಿ ತಯಾರಿಸುವ ಟೊಮೆಟೊ ಚಟ್ನಿ ರುಚಿಯೇ ಬೇರೆ. ಇದರ ಟೇಸ್ಟ್ ಸವಿಯಬೇಕೆಂದರೆ ಇಲ್ಲಿದೆ ಟೊಮೆಟೊ ಚಟ್ನಿ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಟೊಮೆಟೊ – 4
ಸಾಂಬಾರ್‌ಪುಡಿ – 1 ಚಮಚ
ಹುಣಿಸೇ ಹಣ್ಣು- 1/4 ಚಮಚ
ಉಪ್ಪು ರುಚಿಗೆ ತಕ್ಕಷ್ಟು,
ಹಸಿಮೆಣಸಿನಕಾಯಿ – 3
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಉದ್ದಿನ ಬೇಳೆ, 1 ಮೆಣಸಿನ ಕಾಯಿ, ಕರಿಬೇವು.
ಮಾಡುವ ವಿಧಾನ
ಟೊಮೆಟೊವನ್ನು ಚೂರುಗಳಾಗಿ ಕತ್ತರಿಸಿ ಉಪ್ಪು, ಸಾಂಬಾರ್ ಪುಡಿ ಅದಕ್ಕೆ ಸೇರಿಸಿ. ಜೊತೆಗೆ ಹುಣಸೆ ಹಣ್ಣಿನ ರಸ ಹಾಕಿ ಚೆನ್ನಾಗಿ ರುಬ್ಬಬೇಕು.
ಬಾಣಲಿಯಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಮೆಣಸಿನಕಾಯಿ, ಕರಿಬೇವು ಹಾಕಿದ ಒಗ್ಗರಣೆಯನ್ನು ಚಟ್ನಿಗೆ ಬೆರಸಬೇಕು.
ತಯಾರಾದ ಟೊಮೆಟೊ ಚಟ್ನಿಯನ್ನು ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆ ತಿಂದರೆ ರುಚಿಯಾಗಿರುತ್ತದೆ.