ಭಾರತದಲ್ಲಿ ಸ್ಟಾರ್ಟ್ ಅಪ್ ವಲಯವು ಹೊಸ ಹೊಸ ಅವಕಾಶ ಸೃಷ್ಟಿಸುತ್ತಿರುವಂತೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಉದ್ಯೋಗ ಕ್ಷೇತ್ರದಲ್ಲಂತೂ ಜನರು ಒಂದಕ್ಕಿಂತ ಹೆಚ್ಚು ಆಯ್ಕೆ ಕಂಡುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಚೆನ್ನೈ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು, ಶ್ವೇತಾ ಶಂಕರ್ ರಾಪಿಡೋ ಬೈಕ್ ಟ್ಯಾಕ್ಸಿ ಅಪ್ಲಿಕೇಶನ್ ಮೂಲಕ ಸವಾರಿ ಮಾಡಿದ್ದರು.
ಆಕೆಯ ರ್ಯಾಪಿಡೋ ಚಾಲಕ ಸ್ವಿಗ್ಗಿ ಸಮವಸ್ತ್ರವನ್ನು ಧರಿಸಿದ್ದು ಹಾಗೆಯೇ, ಡಂಜೊ ಕಂಪನಿಗೆ ಸೇರಿದ ಬ್ಯಾಗ್ ಹೊಂದಿದ್ದನು. ಶ್ವೇತಾ ಶಂಕರ್ ಪ್ರಾಥಮಿಕವಾಗಿ ರ್ಯಾಪಿಡೋಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಭೇಟಿಯಾಗಿದ್ದು ಆದರೆ, ಆಹಾರ ಮತ್ತು ದಿನಸಿ ವಿತರಣೆಯನ್ನು ಒಳಗೊಂಡಿರುವ ಸೇವೆಯನ್ನೂ ಗಮನಿಸಿದ್ದಾರೆ.
ತನ್ನ ಅನುಭವವನ್ನು ಹಂಚಿಕೊಂಡ ಶ್ವೇತಾ ಶಂಕರ್, ನಿನ್ನೆ ರಾಪಿಡೊ ರೈಡ್ ತೆಗೆದುಕೊಂಡಿದ್ದೇನೆ. ಮತ್ತು ಚಾಲಕ, ಸ್ವಿಗ್ಗಿ ಸಮವಸ್ತ್ರವನ್ನು ಧರಿಸಿ ಡಂಜೊ ಬ್ಯಾಗ್ ಅನ್ನು ಹೊತ್ತೊಯ್ಯುವುದನ್ನು ನೋಡಿದೆ. ಅವರು ಒಂದೇ ಸಮಯದಲ್ಲಿ ಮೂರು ವಿಭಿನ್ನ ಭಾರತೀಯ ಸ್ಟಾರ್ಟ್- ಅಪ್ಗಳಲ್ಲಿ ಕೆಲಸ ಮಾಡುತ್ತಿದ್ದು. ಸ್ಮಾರ್ಟ್ ಜನರು ಹೇಗೆ ಕೆಲಸ ಮಾಡುತ್ತಾರೆ ಎಂಬುದಕ್ಕೆ ಒಂದು ಶ್ರೇಷ್ಠ ಉದಾಹರಣೆ ಎಂದಿದ್ದಾರೆ. ಇದನ್ನು ಕಂಡ ನೆಟ್ಟಿಗರು ಅಭಿಪ್ರಾಯ ನೀಡಿದ್ದಾರೆ.
ಆತ ನಿಜವಾಗಿಯೂ ಲವ್ ಟ್ರಯಾಂಗಲ್ ಎಂದು ಒಬ್ಬರು ವ್ಯಾಖ್ಯಾನಿಸಿದರೆ, ಸ್ಮಾರ್ಟ್ ಕೆಲಸಕ್ಕಿಂತ ಹೆಚ್ಚಾಗಿ ಇದು ಸಮಯದ ಅವಶ್ಯಕತೆಯಾಗಿದೆ. ಅಂತಹವರಿಗೆ ನೀಡುವ ವೇತನವು ಕಡಿಮೆಯಾಗಿದೆ. ಮತ್ತು ಕುಟುಂಬಕ್ಕಾಗಿ ಈ ರೀತಿ ಕೆಲಸ ಮಾಡುತ್ತಾರೆ. ಅವರಿಗೆ ಗೌರವ ಸಲ್ಲಿಸುವುದಾಗಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.