ಸಾಂಪ್ರದಾಯಿಕ ಇಂಧನಗಳ ಬೆಲೆ ದಿನೇ ದಿನೇ ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ನಡುವೆ ಇದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳಲು ಜಗತ್ತು ಬಹಳ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದಂತೆಯೇ ಅನೇಕ ದೇಶಗಳು ಎಲೆಕ್ಟ್ರಾನಿಕ್ ವಾಹನಗಳತ್ತ ಹೊರಳುತ್ತಿದ್ದರೆ ಅತ್ತ ಜಪಾನ್ ಜಲಜನಕವನ್ನು ಇಂಧನವನ್ನಾಗಿ ಬಳಸಲು ಆರಂಭಿಸಿದೆ.
ಟೊಯೋಟಾದ ಮಿರಾಯ್ ಕಾರು ಜಲಜನಕ ಇಂಧನದಿಂದ ಅತ್ಯಂತ ಹೆಚ್ಚು ದೂರ ಕ್ರಮಿಸಿದ ವಿಶ್ವ ದಾಖಲೆ ನಿರ್ಮಿಸಿದೆ. 5.65 ಕೆಜಿ ಜಲಜನಕ ಬಳಸಿ 1,360 ಕಿಮೀ ಕ್ರಮಿಸಿದ ಮಿರಾಯ್, ಪ್ರತಿ ಕೆಜಿ ಇಂಧನಕ್ಕೆ 260 ಕಿಮೀನಷ್ಟು ಮೈಲೇಜ್ ನೀಡಿದೆ.
ಪತಿ ಪೋಸ್ಟ್ ಗೆ ಮಹಿಳೆಯರಿಂದಲೇ ಹೆಚ್ಚು ಲೈಕ್ಸ್…! ಸಿಟ್ಟಿಗೆದ್ದು ಜಗಳಕ್ಕಿಳಿದ ಪತ್ನಿ
ಉತ್ತರ ಅಮೆರಿಕಾದಲ್ಲಿ ರೀಟೇಲ್‌ನಲ್ಲಿ ಮಾರಾಟಕ್ಕಿರುವ ಮಿರಾಯ್ ಕಾರನ್ನು 2016ರಲ್ಲಿ ಪರಿಚಯಿಸಲಾಗಿದೆ.
ಭಾರತದಲ್ಲಿ ಸದ್ಯಕ್ಕೆ ಜಲಜನಕವನ್ನು ಇಂಧನದ ಮೂಲವನ್ನಾಗಿ ಬಳಸುವ ಟ್ರೆಂಡ್ ಇಲ್ಲ. ಜಲಜನಕದ ಉತ್ಪಾದನೆಯ ವೆಚ್ಚ ಹೆಚ್ಚಿರುವ ಕಾರಣ ಹಣದುಬ್ಬರದ ಏರಿಕೆಯ ನಡುವೆ ಈ ಕೆಲಸ ದುಬಾರಿಯೂ ಹೌದು. ಮುಂದಿನ ದಶಕದ ಒಳಗೆ ಒಂದು ಕಿಲೋ ಜಲಜನಕದ ಉತ್ಪಾದನೆಯೇ ಒಂದು ಡಾಲರ್‌ನಷ್ಟಿರಲಿದೆ ಎಂದು ರಿಲಯನ್ಸ್ ಪೆಟ್ರೋಲಿಯಂ ತಿಳಿಸುತ್ತದೆ.