ಬೆಣ್ಣೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಶ್ರೀ ಕೃಷ್ಣನಿಗೂ ಬೆಣ್ಣೆ ಅಂದ್ರೆ ವಿಶೇಷ ಪ್ರೀತಿಯಿತ್ತು. ಅದಕ್ಕೆ ಅವನನ್ನು ಬೆಣ್ಣೆ ಕೃಷ್ಣ ಅಂತಾ ಕರೆಯುತ್ತಾರೆ. ಬೆಣ್ಣೆಯು ರುಚಿಯನ್ನು ಹೆಚ್ಚಿಸುವ ಜೊತೆಗೆ ಅನೇಕ ಬೇಕಿಂಗ್ ರೆಸಿಪಿಗಳು, ಇಟಾಲಿಯನ್, ಫ್ರೆಂಚ್, ಅಮೆರಿಕನ್ ಮತ್ತು ಭಾರತೀಯ ಖಾದ್ಯಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ.
ಆದರೆ ಈಗ, ಯುಕೆಯ ಒಂದು ವಿಶೇಷ ರೀತಿಯ ಬೆಣ್ಣೆಯು ಎಲ್ಲಾ ಡೈರಿ ಪ್ರಾಡಕ್ಟ್ ಪ್ರಿಯರನ್ನು ಬೆರಗುಗೊಳಿಸಿದೆ.ನಿಮ್ಮ ಸೌಂದರ್ಯ ʼರಕ್ಷಣೆʼ ನಿಮ್ಮ ಕೈಯಲ್ಲಿ….!
ಸಾಮಾನ್ಯವಾಗಿ ಬೆಣ್ಣೆಗೆ ಎಷ್ಟು ರೂಪಾಯಿ ಇರುತ್ತದೆ. 50 ರೂ. 200 ರೂ. , 300 ರೂ.. ಇರಬಹುದು. ಆದರೆ, ರಿಡಿಕ್ಯುಲಸ್ ನಂ.55ನ ಲಾಬ್‍ಸ್ಟರ್ ಮತ್ತು ಏಡಿ ಬೆಣ್ಣೆ ಎಂದು ಕರೆಯಲ್ಪಡುವ ಬ್ರಿಟಿಷ್ ಬೆಣ್ಣೆಗೆ ಅತ್ಯಧಿಕ ಅಂದರೆ 95 ಪೌಂಡ್ ನಷ್ಟು ವೆಚ್ಚವಾಗುತ್ತದೆ. ಅಂದರೆ, ಸುಮಾರು 10,000 ರೂಪಾಯಿಗಳಷ್ಟು. ಲಾಬ್‍ಸ್ಟರ್, ಡೆವೊನ್ ಏಡಿ, ಕ್ಯಾವಿಯರ್, ನಿಂಬೆ ಮತ್ತು ಫೆನ್ನೆಲ್‍ನೊಂದಿಗೆ ರುಚಿಯಾಗಿರುವುದರಿಂದ ಬೆಲೆ ದುಬಾರಿಯಾಗಿದೆ.
ರಾತ್ರಿ ವಾಟ್ಸಾಪ್, ಫೇಸ್ ಬುಕ್ ಬಂದ್. ಸರ್ವರ್ ಡೌನ್ ಆಗಿ ಗ್ರಾಹಕರು ಕಂಗಾಲು –ಬಳಿಕ ಸರಿಯಾದ ಸೋಷಿಯಲ್ ಮೀಡಿಯಾ ಸೈಟ್, ನಿಟ್ಟುಸಿರು ಬಿಟ್ಟ ಬಳಕೆದಾರರು
ನಂ.55 ಲಾಬ್‍ಸ್ಟರ್ ಮತ್ತು ಏಡಿ ಬೆಣ್ಣೆಯು ಸೀಮಿತ ಆವೃತ್ತಿಯ ಬೆಣ್ಣೆ ಖಾದ್ಯದಲ್ಲಿ ಬರುತ್ತದೆ. ಖಾದ್ಯವನ್ನು ಇಟಲಿಯಲ್ಲಿ ತಯಾರಿಸಲಾಗುತ್ತದೆ ಮತ್ತು ವಿಶೇಷವಾಗಿ ಉತ್ಪನ್ನಕ್ಕೆಂದೇ ತಯಾರಿಸಲಾಗುತ್ತದೆ. ಇದು ಇತ್ತೀಚೆಗೆ ವಿಶ್ವದ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಹಾಗೂ ಈ ವರ್ಷದ ಗ್ರೇಟ್ ಟೇಸ್ಟ್ ಅವಾರ್ಡ್ಸ್‌ನಲ್ಲಿ ಮೂರು ಸ್ಟಾರ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.