alex Certify ಬಂಬಲ್​ನಲ್ಲಿ ಭೇಟಿಯಾಗಿ ಡೇಟ್​ಗೆ ಹೊರಟವರ ಮಿನಿ ಕನ್ಸರ್ಟ್….​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಬಲ್​ನಲ್ಲಿ ಭೇಟಿಯಾಗಿ ಡೇಟ್​ಗೆ ಹೊರಟವರ ಮಿನಿ ಕನ್ಸರ್ಟ್….​!

ಹೆಚ್ಚಿನವರು ಒಂಟಿತನವನ್ನು ತೊಡೆದುಹಾಕಲು ಮತ್ತು ಸಂಗಾತಿಯನ್ನು ಹುಡುಕಲು ಡೇಟಿಂಗ್​ ಅಪ್ಲಿಕೇಶನ್​ಗಳನ್ನು ಬಳಸುವುದುಂಟು. ಆದರೆ, ಇಲ್ಲೊಂದು ಪ್ರಸಂಗದಲ್ಲಿ ಡೇಟ್​ಗೆ ಹೊರಟವರು ಮಿನಿ ಕನ್ಸರ್ಟ್​ ನೀಡಿ ಸುದ್ದಿಯಾಗಿದ್ದಾರೆ.

ಈ ಹುಡುಗ ಮತ್ತು ಹುಡುಗಿಯ ವಿಷಯದಲ್ಲಿ ಡೇಟಿಂಗ್​ ಅಪ್ಲಿಕೇಷನ್​ ವಿಚಿತ್ರ ತಿರುವು ನೀಡಿದೆ. ಇಬ್ಬರೂ ಬಂಬಲ್​ನಲ್ಲಿ ಭೇಟಿಯಾದರು ಮತ್ತು ಸಂಗೀತದ ಮೇಲಿನ ಅವರ ಸಾಮಾನ್ಯ ಪ್ರೀತಿಯನ್ನು ಅರಿತುಕೊಂಡಿದ್ದರು. ಬಳಿಕ ಅವರಿಬ್ಬರು ಡೇಟ್​ಗೆ ಹೊರಟು ಭೇಟಿಯಾದಾಗ ಸಂಗೀತ ಕಾರ್ಯಕ್ರಮವನ್ನೇ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೆೈರಲ್​ ಆಗಿರುವ ವಿಡಿಯೊದಲ್ಲಿ, ಹುಡುಗ ಮತ್ತು ಹುಡುಗಿ ಇಬ್ಬರೂ ಐರಿಶ್​ ರಾಕ್​ ಬ್ಯಾಂಡ್​ ಕೊಡಲಿನೆಯ, ಆಲ್​ ಐ ವಾಂಟ್​…… ಅನ್ನು ಹಾಡಿದ್ದಾರೆ. ಅದರ ವಿಶೇಷ ಭಾಗವೆಂದರೆ ಅದು ಅವರ ಮೊದಲ ಡೇಟ್​ ಆಗಿತ್ತು.

ಟ್ವಿಟ್ಟರ್​ನಲ್ಲಿ ಡಿಎಸ್​ ಎಂಬ ಪೇಜ್​ ಶೇರ್​ ಮಾಡಿರುವ ವಿಡಿಯೋದಲ್ಲಿ ಆ ಹುಡುಗ- ಹುಡುಗಿ ಆರಂಭದಲ್ಲಿ ಮುಸಿಮುಸಿ ನಗುತ್ತಿರುವುದನ್ನು ಕಾಣಬಹುದು. ಶೀಘ್ರದಲ್ಲೇ, ಹುಡುಗ ಗಿಟಾರ್​ನಲ್ಲಿ ಆಲ್​ ಐ ವಾಂಟ್​……. ನುಡಿಸಲು ಪ್ರಾರಂಭಿಸಿದನು ಮತ್ತು ಹುಡುಗಿ ಹಾಡಿದ್ದಾಳೆ. ನೋಡಲು ತುಂಬಾ ಸ್ವೀಟ್​ ಎನಿಸುತ್ತದೆ.

ಇದನ್ನು ಕಂಡ ನೆಟ್ಟಿಗರು ಜೋಡಿಗೆ ಹಾರೈಸಿದ್ದಾರೆಲ್ಲದೆ, ಈ ಹಾಡಿನ ಕ್ಷಣದ ಬಗ್ಗೆ ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...