ಹೆಚ್ಚಿನವರು ಒಂಟಿತನವನ್ನು ತೊಡೆದುಹಾಕಲು ಮತ್ತು ಸಂಗಾತಿಯನ್ನು ಹುಡುಕಲು ಡೇಟಿಂಗ್ ಅಪ್ಲಿಕೇಶನ್ಗಳನ್ನು ಬಳಸುವುದುಂಟು. ಆದರೆ, ಇಲ್ಲೊಂದು ಪ್ರಸಂಗದಲ್ಲಿ ಡೇಟ್ಗೆ ಹೊರಟವರು ಮಿನಿ ಕನ್ಸರ್ಟ್ ನೀಡಿ ಸುದ್ದಿಯಾಗಿದ್ದಾರೆ.
ಈ ಹುಡುಗ ಮತ್ತು ಹುಡುಗಿಯ ವಿಷಯದಲ್ಲಿ ಡೇಟಿಂಗ್ ಅಪ್ಲಿಕೇಷನ್ ವಿಚಿತ್ರ ತಿರುವು ನೀಡಿದೆ. ಇಬ್ಬರೂ ಬಂಬಲ್ನಲ್ಲಿ ಭೇಟಿಯಾದರು ಮತ್ತು ಸಂಗೀತದ ಮೇಲಿನ ಅವರ ಸಾಮಾನ್ಯ ಪ್ರೀತಿಯನ್ನು ಅರಿತುಕೊಂಡಿದ್ದರು. ಬಳಿಕ ಅವರಿಬ್ಬರು ಡೇಟ್ಗೆ ಹೊರಟು ಭೇಟಿಯಾದಾಗ ಸಂಗೀತ ಕಾರ್ಯಕ್ರಮವನ್ನೇ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೆೈರಲ್ ಆಗಿರುವ ವಿಡಿಯೊದಲ್ಲಿ, ಹುಡುಗ ಮತ್ತು ಹುಡುಗಿ ಇಬ್ಬರೂ ಐರಿಶ್ ರಾಕ್ ಬ್ಯಾಂಡ್ ಕೊಡಲಿನೆಯ, ಆಲ್ ಐ ವಾಂಟ್…… ಅನ್ನು ಹಾಡಿದ್ದಾರೆ. ಅದರ ವಿಶೇಷ ಭಾಗವೆಂದರೆ ಅದು ಅವರ ಮೊದಲ ಡೇಟ್ ಆಗಿತ್ತು.
ಟ್ವಿಟ್ಟರ್ನಲ್ಲಿ ಡಿಎಸ್ ಎಂಬ ಪೇಜ್ ಶೇರ್ ಮಾಡಿರುವ ವಿಡಿಯೋದಲ್ಲಿ ಆ ಹುಡುಗ- ಹುಡುಗಿ ಆರಂಭದಲ್ಲಿ ಮುಸಿಮುಸಿ ನಗುತ್ತಿರುವುದನ್ನು ಕಾಣಬಹುದು. ಶೀಘ್ರದಲ್ಲೇ, ಹುಡುಗ ಗಿಟಾರ್ನಲ್ಲಿ ಆಲ್ ಐ ವಾಂಟ್……. ನುಡಿಸಲು ಪ್ರಾರಂಭಿಸಿದನು ಮತ್ತು ಹುಡುಗಿ ಹಾಡಿದ್ದಾಳೆ. ನೋಡಲು ತುಂಬಾ ಸ್ವೀಟ್ ಎನಿಸುತ್ತದೆ.
ಇದನ್ನು ಕಂಡ ನೆಟ್ಟಿಗರು ಜೋಡಿಗೆ ಹಾರೈಸಿದ್ದಾರೆಲ್ಲದೆ, ಈ ಹಾಡಿನ ಕ್ಷಣದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
https://twitter.com/ModijiKiChaai/status/1573726290158358528?ref_src=twsrc%5Etfw%7Ctwcamp%5Etweetembed%7Ctwterm%5E1573726290158358528%7Ctwgr%5E040a144a6e699185c5bfcf979fcd2c55525cc526%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-boy-and-girl-met-on-bumble-and-went-for-a-date-for-the-first-time-and-then-2005009-2022-09-26