alex Certify ಸ್ಟಾರ್ಟ್ ಅಪ್ ಚಹಾಗೆ ಉಕ್ರೇನ್ ಅಧ್ಯಕ್ಷರ ಹೆಸರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟಾರ್ಟ್ ಅಪ್ ಚಹಾಗೆ ಉಕ್ರೇನ್ ಅಧ್ಯಕ್ಷರ ಹೆಸರು…..!

ಅಸ್ಸಾಂ ಮೂಲದ ಟೀ ಸ್ಟಾರ್ಟ್‌ಅಪ್ ತನ್ನ ಉತ್ಪನ್ನಕ್ಕೆ ಅಚ್ಚರಿ ಹೆಸರಿಟ್ಟು ಗಮನ ಸೆಳೆದಿದೆ. ಹೆಸರಿನ ಮೂಲಕವೇ ಪ್ರಪಂಚದಾದ್ಯಂತ ಸುವಾಸನೆ ಬೀರಿದೆ. ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಧೈರ್ಯ ಮತ್ತು ಶೌರ್ಯವನ್ನು ಗೌರವಿಸಲು ಅವರ ಹೆಸರನ್ನೇ ತನ್ನ ಉತ್ಪನ್ನಕ್ಕೆ ಹೆಸರಿಸಿದೆ.

ಶುಭ ಸುದ್ದಿ: ವಿವಿಧ ಹುದ್ದೆಗಳಿಗೆ KPSC ಅರ್ಜಿ ಆಹ್ವಾನ, ಕಲ್ಯಾಣ ಕರ್ನಾಟಕದವರಿಗೆ ಗುಡ್ ನ್ಯೂಸ್

ಲೆಕ್ಸುರಿಯಾದಂತಹ ಚಹಾಗಳಲ್ಲಿ ಪರಿಣತಿ ಹೊಂದಿರುವ ಗುವಾಹಟಿಯ ಅರೋಮಿಕಾ ಟೀ ಮಾಲೀಕರಾದ ರಂಜಿತ್ ಬರುವಾ ಹೇಳುವ ಪ್ರಕಾರ ಈ ಬ್ರ್ಯಾಂಡ್‌ನೊಂದಿಗೆ ಶಕ್ತಿ ಮತ್ತು ಧೈರ್ಯದ ಸಂಕೇತ ಸಂಯೋಜಿಸಲು ಝೆಲೆನ್ಸ್‌ಕೈ- ಸ್ಟ್ರಾಂಗ್ ಅಸ್ಸಾಂ ಸಿಟಿಸಿ ಟೀ ಅನ್ನು ಬುಧವಾರ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

ಉಕ್ರೇನ್‌ನಿಂದ ತಪ್ಪಿಸಿಕೊಳ್ಳಬಹುದೆಂಬ ಪ್ರಸ್ತಾಪವನ್ನು ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷರ ಶೌರ್ಯ ಮತ್ತು ಧೈರ್ಯ ಗೌರವಿಸುವುದು ಇದರ ಹಿಂದಿನ ಆಲೋಚನೆಯಾಗಿದೆ.

ಟೀ ಬೋರ್ಡ್‌ನ ಅಂಕಿಅಂಶಗಳ ಪ್ರಕಾರ ಭಾರತದ ಚಹಾದ ಅತಿ ದೊಡ್ಡ ಆಮದುದಾರ ರಷ್ಯಾವು 2021 ರಲ್ಲಿ 34.09 ಮಿಲಿಯನ್ ಕೆಜಿ ಬ್ರೂ ಅನ್ನು ಪಡೆದುಕೊಂಡಿದೆ. ಉಕ್ರೇನ್ ಕೂಡ ಭಾರತದಿಂದ 1.73 ಮಿಲಿಯನ್ ಕೆಜಿ ಚಹಾವನ್ನು ಆಮದು ಮಾಡಿಕೊಂಡಿದೆ.

ಇತ್ತ ಚಹಾ ತೋಟಗಳ ಮಾಲಿಕರು ಮತ್ತು ರಫ್ತುದಾರರು ಇತ್ತೀಚೆಗೆ ಯುದ್ಧದ ಮಧ್ಯೆ ರಷ್ಯಾಕ್ಕೆ ಇಲ್ಲಿನ ಟೀ ಪುಡಿ ಸಾಗಣೆಯ ಮೇಲೆ ಪ್ರಭಾವ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...