ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಚಾಟ್ ಮಾರಾಟ ಮಾಡುತ್ತಿರುವುದನ್ನು ನೋಡಿ ಜನರು ಕಂಗಾಲಾಗಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಅಸಲಿಗೆ ಈತ ಅರವಿಂದ್ ಕೇಜ್ರಿವಾಲ್ ಅಲ್ಲ, ಬದಲಿಗೆ ಅವರನ್ನು ಪಕ್ಕಾ ಹೋಲುವ ವ್ಯಕ್ತಿ ಆಗಿದ್ದಾನೆ. “ಅರವಿಂದ್ ಕೇಜ್ರಿವಾಲ್ ಗ್ವಾಲಿಯರ್‌ನಲ್ಲಿ ಚಾಟ್ ಮಾರಾಟ ಮಾಡುತ್ತಿದ್ದಾರೆ” ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ವೈರಲ್ ಆಗಿದೆ.
ಉಡುಪಿನ ಆಯ್ಕೆಯಿಂದ ಹಿಡಿದು ಚಾಟ್ವಾಲನ ಐಕಾನಿಕ್ ಕ್ಯಾಪ್ವರೆಗೆ ಕೇಜ್ರಿವಾಲ ಅವರ ಲುಕ್ ಇದೆ. ಮಾತ್ರವಲ್ಲದೇ ಕೇಜ್ರಿವಾಲ್ ಅವರು ಧರಿಸುವ ಕನ್ನಡಕದಂತೆ ತೋರುವ ಕನ್ನಡವನ್ನೂ ಹಾಕಿಕೊಂಡಿದ್ದರಿಂದ ನೋಡುಗರು ಇವರೇ ಕೇಜ್ರಿವಾಲ ಎನ್ನುತ್ತಿದ್ದಾರೆ.
“ದೆಹಲಿಯ ಕೇಜ್ರಿವಾಲ್ ನಾಗರಿಕರಿಗೆ ಅನೇಕ ಉಚಿತ ಕೊಡುಗೆಯನ್ನು ನೀಡಿದ್ದರೂ, ಗ್ವಾಲಿಯರ್‌ನ ಕೇಜ್ರಿವಾಲ್ ಗುಣಮಟ್ಟವನ್ನು ನಂಬುತ್ತಾರೆ” ಎಂದು ಟ್ವಿಟರ್ ಬಳಕೆದಾರ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲೇ, ಕೇಜ್ರಿವಾಲ್-ಡೊಪ್ಪೆಲ್‌ಗ್ಯಾಂಗರ್, ಗ್ವಾಲಿಯರ್‌ನಲ್ಲಿನ ಇತರ ಆಹಾರ ಮಳಿಗೆಗಳಿಗಿಂತ ಭಿನ್ನವಾಗಿ, ಅವರು ಅತ್ಯುತ್ತಮ ಗುಣಮಟ್ಟದ ಚಾಟ್ ಅನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಾರೆ ಎಂದು ಹಲವರು ಇದನ್ನು ನೋಡಿ ವ್ಯಂಗ್ಯವಾಡಿದ್ದಾರೆ.
https://youtu.be/z0EOvRA0wkw