alex Certify ಪಿಸಿಆರ್‌ ಪರೀಕ್ಷೆಗೆ ಅಂತ್ಯ ಹಾಡುತ್ತಾ ಕೃತಕ ಬುದ್ಧಿಮತ್ತೆ ಆಧರಿತ ಈ ತಂತ್ರಜ್ಞಾನ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಸಿಆರ್‌ ಪರೀಕ್ಷೆಗೆ ಅಂತ್ಯ ಹಾಡುತ್ತಾ ಕೃತಕ ಬುದ್ಧಿಮತ್ತೆ ಆಧರಿತ ಈ ತಂತ್ರಜ್ಞಾನ….?

ಕೋವಿಡ್-19 ಸೋಂಕುಗಳನ್ನು ಪತ್ತೆ ಮಾಡಲು ಸದ್ಯಕ್ಕೆ ಬಳಸಲಾಗುತ್ತಿರುವ ಪಿಸಿಆರ್‌ ಪರೀಕ್ಷೆಗಳಿಗೆ ಗುಡ್‌ಬೈ ಹೇಳಬಹುದಾದ ಘಟನೆಯೊಂದರಲ್ಲಿ, ಕೃತಕ ಬುದ್ಧಿವಂತಿಕೆ (ಎಐ) ಆಧರಿತ ವಿಶೇಷ ಎಕ್ಸ್‌-ರೇಗಳ್ನು ಸ್ಕಾಟ್ಲೆಂಡ್‌ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ವೆಸ್ಟ್ ಆಫ್ ಸ್ಕಾಟ್ಲೆಂಡ್ ವಿವಿ (ಯುಡಬ್ಲ್ಯೂಎಸ್) ತಜ್ಞರು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನವು 98%ನಷ್ಟು ನಿಖರವಾಗಿ, ಕೆಲವೇ ನಿಮಿಷಗಳಲ್ಲಿ ಕೋವಿಡ್-19 ಸೋಂಕನ್ನು ಪತ್ತೆ ಮಾಡುತ್ತದೆ. ಪಿಸಿಆರ್‌ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಇದಕ್ಕಾಗಿ 2 ಗಂಟೆಗಳ ಕಾಲ ಕಾಯಬೇಕಾಗುತ್ತದೆ.

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 703 ಜನರು ಮಹಾಮಾರಿಗೆ ಬಲಿ

ಕೋವಿಡ್-19 ಸೋಂಕಿತರು, ಆರೋಗ್ಯವಂತ ವ್ಯಕ್ತಿಗಳು ಹಾಗೂ ವೈರಲ್ ಆಗಿರುವ ನ್ಯುಮೋನಿಯಾದಿಂದ ಬಳಲುತ್ತಿರುವ ಮಂದಿಯ ಸುಮಾರು 3,000 ಚಿತ್ರಗಳ ದತ್ತಾಂಶವನ್ನು ಕ್ಷಣಮಾತ್ರದಲ್ಲಿ ಸ್ಮರಿಸಿ ನೋಡಬಲ್ಲ ಈ ತಂತ್ರಜ್ಞಾನವು, ಎಐ ಬಳಸಿಕೊಂಡು, ನರಜಾಲದ ಮಿಡಿತಗಳನ್ನು ಗ್ರಹಿಸಿ, ವಿಶೇಷವಾದ ಆಲ್ಗರಿದಮ್ ಬಳಸಿಕೊಂಡು ತಪಾಸಣೆ ನಡೆಸುತ್ತದೆ.

ಈ ತಂತ್ರಜ್ಞಾನವು, ಪಿಸಿಆರ್‌ ಸೌಲಭ್ಯಗಳಿಲ್ಲದ ದೇಶಗಳಲ್ಲಿ ಹಾಗೂ ಅದಾಗಲೇ ವಿಪರೀತ ಒತ್ತಡದಲ್ಲಿರುವ ಅಪಘಾತ ಮತ್ತು ತುರ್ತು ಇಲಾಖೆಗಳಿಗೆ ನಿರಾಳತೆ ತರುವುದೆಂದು ನಂಬಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...