ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಸ್ಯಾಂಡಲ್ವುಡ್ನಲ್ಲಿ ಬೆರಳಣಿಕೆಯ ಸಿನಿಮಾಗಳನ್ನ ಮಾಡಿದ್ರೂ ಕೂಡ ಪ್ರೇಕ್ಷಕರ ಮನದಲ್ಲಿ ದಟ್ಟವಾಗಿ ನೆಲೆಯೂರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಟ ಸ್ವಾತಿ ಪರಶುರಾಮನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸ್ವಾತಿ ಸಿನಿರಂಗದ ಹಿನ್ನೆಲೆಯುಳ್ಳವರಲ್ಲದ ಕಾರಣ ಬಹುತೇಕರಿಗೆ ಇಬ್ಬರ ಲವ್ ಲೈಫ್ ಬಗ್ಗೆ ತಿಳಿದೇ ಇಲ್ಲ. ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಸ್ವಾತಿ ತಮ್ಮ ಜೀವನದಲ್ಲಿ ರಿಶಿ ಆಗಮನ ಹೇಗೆ ಆಯ್ತು ಅನ್ನೋದನ್ನ ಮನ ಬಿಚ್ಚಿ ಮಾತನಾಡಿದ್ದಾರೆ.
ರಿಷಿ ಆಗಿನ್ನೂ ನಟನಾ ಲೋಕದಲ್ಲಿ ಅಂಬೆಗಾಲನ್ನ ಇಡುತ್ತಿರುವಾಗಲೇ ಸ್ವಾತಿಯವರ ಪರಿಚಯವಾಗಿತ್ತು. ಪದವಿ ಶಿಕ್ಷಣ ಪೂರೈಸಿದ್ದ ಸ್ವಾತಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಿಷಿ ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಸ್ವಾತಿ ನಾಟಕವನ್ನ ನೋಡಲು ತೆರಳಿದ್ದ ವೇಳೆ ಮೊದಲ ಬಾರಿಗೆ ಅವರು ರಿಷಿಯನ್ನ ನೋಡಿದ್ದರಂತೆ. ನಾಟಕದ ವಿರಾಮದ ವೇಳೆಯಲ್ಲಿ ರಿಷಿಯನ್ನ ಸ್ವಾತಿ ಮಾತನಾಡಿಸಿ ಅವರ ನೃತ್ಯವನ್ನ ಹಾಡಿ ಹೊಗಳಿದ್ದರಂತೆ. ಇದಾದ ಬಳಿಕ ಫೇಸ್ಬುಕ್ನಲ್ಲಿ ಸ್ನೇಹಿತರಾದ ಇವರಿಬ್ಬರು ಚಾಟಿಂಗ್ ಆರಂಭಿಸಿದ್ರು.
ಮಳೆಗಾಲದಲ್ಲಿ ಒಂದು ಈರುಳ್ಳಿ ಕಾಪಾಡಬಹುದು ನಿಮ್ಮ ‘ಆರೋಗ್ಯ’
ಇದಾದ ಕೆಲ ತಿಂಗಳು ಅವರು ಒಬ್ಬರನ್ನೊಬ್ಬರು ಭೇಟಿ ಮಾಡುತ್ತಿದ್ದರು. ಒಂದಿನ ಇಬ್ಬರೂ ಪ್ರೇಮ ನಿವೇದನೆಯನ್ನೂ ಮಾಡಿಕೊಂಡಿದ್ದಾರೆ. ಸಿನಿ ಲೋಕದಲ್ಲಿ ರಿಷಿ ಹಸೆರನ್ನ ಪಡೆಯುವ ಪ್ರತಿ ಹೆಜ್ಜೆಯಲ್ಲಿಯೂ ಸ್ವಾತಿ ಜೊತೆಯಾಗಿ ನಿಂತಿದ್ದರಂತೆ. ʼಆಪರೇಷನ್ ಅಲಮೇಲಮ್ಮʼ ಸಿನಿಮಾದಲ್ಲಿ ರಿಷಿ ಯಶಸ್ಸನ್ನ ಗಳಿಸಿದ ಬಳಿಕ ಈ ಜೋಡಿ ತಮ್ಮ ಪ್ರೇಮದ ವಿಚಾರವನ್ನ ಬಹಿರಂಗ ಮಾಡಿತ್ತು.
ಸ್ನೇಹಿತರೊಂದಿಗೆ ಸೆಕ್ಸ್ ಗೆ ಸಹಕರಿಸಲು ಪತ್ನಿಗೆ ಬಲವಂತ, ಗಂಡನ ಕಿರುಕುಳ ತಾಳದೇ ಪೋಲಿಸ್ ಮೊರೆ ಹೋದ ಮಹಿಳೆ
ತಮಿಳು ಬ್ರಾಹ್ಮಣ ಹಾಗೂ ಕನ್ನಡಿಗರ ಸಂಪ್ರದಾಯದಂತೆ ಇವರು ಮದುವೆಯಾಗಿದ್ದಾರೆ. ತಾಳಿ ಕಟ್ಟೋಕೆ ಕೆಲವೇ ಕ್ಷಣಗಳ ಮೊದಲು ರಿಷಿ, ಸ್ವಾತಿ ಬಳಿ ನಾನು ನಿನ್ನನ್ನ ಮದುವೆಯಾಗಲೇ ಎಂದು ಕೇಳಿದ್ದರು ಎಂದು ನಗುತ್ತಾರೆ ಸ್ವಾತಿ ಪರಶುರಾಮನ್..!