alex Certify ಸ್ನೇಹಿತರೊಂದಿಗೆ ಸೆಕ್ಸ್ ಗೆ ಸಹಕರಿಸಲು ಪತ್ನಿಗೆ ಬಲವಂತ, ಗಂಡನ ಕಿರುಕುಳ ತಾಳದೇ ಪೋಲಿಸ್ ಮೊರೆ ಹೋದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರೊಂದಿಗೆ ಸೆಕ್ಸ್ ಗೆ ಸಹಕರಿಸಲು ಪತ್ನಿಗೆ ಬಲವಂತ, ಗಂಡನ ಕಿರುಕುಳ ತಾಳದೇ ಪೋಲಿಸ್ ಮೊರೆ ಹೋದ ಮಹಿಳೆ

ಬೆಂಗಳೂರು: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡಿದ ಘಟನೆ ನಡೆದಿದ್ದು, ನೊಂದ ಮಹಿಳೆ ಪೂರ್ವ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಬಿಟಿಎಂ ಎರಡನೇ ಹಂತದ ನಿವಾಸಿಯಾಗಿರುವ 38 ವರ್ಷದ ವಾಸೀಂ ಷರೀಫ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 2018 ರಲ್ಲಿ ಮದುವೆಯಾಗಿರುವ ದಂಪತಿಗೆ ಒಂದು ಹೆಣ್ಣು ಮಗು ಇದೆ. ಮದುವೆಯಾದ ಸಂದರ್ಭದಲ್ಲಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿ ಮದ್ಯಪಾನ ಮಾಡುವಂತೆ ಬಲವಂತ ಮಾಡಿದ್ದ. ಒಪ್ಪದಿದ್ದಾಗ ಹಲ್ಲೆ ನಡೆಸಿದ್ದ ಎಂದು ದೂರಲಾಗಿದೆ.

ನಂತರದಲ್ಲಿ ಊಟಿಗೆ ಕರೆದುಕೊಂಡು ಹೋಗಿ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸಿದ್ದಾನೆ. ನಾನು ನನ್ನ ಸ್ನೇಹಿತರ ಪತ್ನಿಯರೊಂದಿಗೆ ಸಂಬಂಧ ಹೊಂದಿದ್ದೇನೆ. ನೀನು ಕೂಡ ನನ್ನ ಸ್ನೇಹಿತರ ಜೊತೆ ಸಹಕರಿಸಬೇಕೆಂದು ಪತ್ನಿಗೆ ಹಿಂಸೆ ನೀಡಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮಹಿಳೆ ಆತನ ಪೋಷಕರಿಗೆ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೂ, ಆರೋಪಿ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ೆರಡು ಬಾರಿ ಹಲ್ಲೆ ಮಾಡಿದ್ದರಿಂದ ಗರ್ಭಪಾತವಾಗಿತ್ತು. ಆತನಿಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿದೆ ಎಂದು ಮಹಿಳೆ ದೂರು ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...