alex Certify ಮದುವೆಯ ಮೆರವಣಿಗೆ ವೇಳೆ ಪುಟಾಣಿಗಳ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯ ಮೆರವಣಿಗೆ ವೇಳೆ ಪುಟಾಣಿಗಳ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಕೆಲವೊಂದು ವಾದ್ಯಗಳನ್ನು ನುಡಿಸಿದ ತಕ್ಷಣ ಬೇಡಬೇಡವೆಂದರೂ ಜನರು ಸ್ಟೆಪ್​ ಹಾಕಲು ಶುರು ಮಾಡುತ್ತಾರೆ. ಅದರಲ್ಲಿಯೂ ಮದುವೆಯ ಮೆರವಣಿಗೆ ವೇಳೆ ಬಾರಿಸುವ ಡೋಲಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಡೋಲಿಗೆ ಇಬ್ಬರು ಪುಟಾಣಿ ಬಾಲಕಿಯರು ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದೆ. ಇದಾಗಲೇ ಈ ವಿಡಿಯೋ 39 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಬಾಲಕಿಯರು ಮನೆಯ ಹೊರಗೆ ಕುಳಿತಿರುತ್ತಾರೆ. ಆ ವೇಳೆ ಮದುವೆಯ ಮೆರವಣಿಗೆ ಬೀದಿಯಲ್ಲಿ ಬರುತ್ತದೆ. ಆಗ ಬಾರಿಸುವ ಡೋಲಿಗೆ ಮೊದಲು ಒಬ್ಬ ಬಾಲಕಿ ನರ್ತಿಸುತ್ತಾಳೆ. ನಂತರ ಇನ್ನೊಬ್ಬಳನ್ನೂ ಆಕೆ ಹುರಿದುಂಬಿಸುತ್ತಾಳೆ. ನಂತರ ಇಬ್ಬರೂ ಸೇರಿ ಸ್ಟೆಪ್​ ಹಾಕುತ್ತಾರೆ.

ಅಲ್ಲಿಯೇ ಇದ್ದವರು ಇದರ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಪುಟ್ಟ ಮಕ್ಕಳ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...