alex Certify 12 ವರ್ಷದ ಈ ಪೋರನ ಐಕ್ಯೂ ಐನ್‌ಸ್ಟೀನ್‌ಗಿಂತ ಹೆಚ್ಚು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ವರ್ಷದ ಈ ಪೋರನ ಐಕ್ಯೂ ಐನ್‌ಸ್ಟೀನ್‌ಗಿಂತ ಹೆಚ್ಚು….!

This 12-year-old English schoolboy with IQ 162 is smarter than Einstein -  Education Today News

ಇಂಗ್ಲೆಂಡ್‌ನ ಬ್ರಿಸ್ಟಾಲ್‌ನ 12 ವರ್ಷದ ಈ ಶಾಲಾ ಬಾಲಕನ ಬುದ್ಧಿಮತ್ತೆ ಸೂಚ್ಯಂಕ (ಐಕ್ಯೂ) 162ರಷ್ಟಿದ್ದು, ಆಲ್ಬರ್ಟ್ ಐನ್‌ಸ್ಟೀನ್‌ಗಿಂತಲೂ ಹೆಚ್ಚಿನ ಐಕ್ಯೂ ಹೊಂದಿದ್ದಾನೆ. ಐನ್‌ಸ್ಟೀನ್‌ರ ಐಕ್ಯೂ 160 ಇತ್ತು ಎನ್ನಲಾಗಿದೆ.

ಬಾರ್ನಬಿ ಸ್ವಿನ್ಬುರ್ನೆ ಹೆಸರಿನ ಈ ಬಾಲಕ ಡಿಸೆಂಬರ್‌ನಲ್ಲಿ, 18 ವರ್ಷದೊಳಗಿನವರ ಐಕ್ಯೂ ಪರೀಕ್ಷೆಯಲ್ಲಿ ಗರಿಷ್ಠ ಸೂಚ್ಯಂಕ ದಾಖಲಿಸಿದ ಬಳಿಕ ಈತನನ್ನು ಅಧಿಕ ಐಕ್ಯೂ ಸಮುದಾಯ ಮೆನ್ಸಾಗೆ ದಾಖಲಿಸಲಾಗಿದೆ. ಜಗತ್ತಿನ ಜನಸಂಖ್ಯೆಯ ಪೈಕಿ ಐಕ್ಯೂ ವಿಚಾರದಲ್ಲಿ ಮೇಲ್ಪಂಕ್ತಿಯಲ್ಲಿರುವ 2%ನಷ್ಟು ಮಂದಿಯನ್ನು ಮೆನ್ಸಾ ಪರಿಗಣಿಸುತ್ತದೆ.

ಪ್ರತಿದಿನ ಶುಂಠಿ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನ

ಕ್ರಿಸ್ಮಸ್ ಸಂದರ್ಭದಲ್ಲಿ ಮೆನ್ಸಾದ ಐಕ್ಯೂ ಪರೀಕ್ಷೆ ಎದುರಿಸಿದ ಬಾರ್ನಬಿ ಸ್ವಿನ್ಬುರ್ನೆ, ಪರೀಕ್ಷೆಯಲ್ಲಿ ಕ್ಲಿಷ್ಟವಾದ ಚಿತ್ರಗಳು, ಶ್ರೇಣಿಗಳು, ವಿವಿಧ ರೀತಿಯ ಭಾಷೆಗಳನ್ನೆಲ್ಲಾ ಎದುರಿಸಿ ಗೆದ್ದು ಬಂದಿದ್ದಾನೆ. ಇದರ ಪ್ರಯುಕ್ತ ತೆಗೆದುಕೊಂಡ ಎರಡು ಪರೀಕ್ಷೆಗಳಲ್ಲಿ 12ರ ಪೋರ ಮಕ್ಕಳ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಇಷ್ಟು ಅಂಕ ಗಳಿಸಿದ 1%ರಷ್ಟು ಮಕ್ಕಳನ್ನು ಸೇರಿದ್ದರೆ, ಒಟ್ಟಾರೆ ಜನಸಂಖ್ಯೆ ತೆಗೆದುಕೊಂಡರೆ ಈ ಸಾಧನೆಗೈದ 4% ಮಂದಿಯಲ್ಲಿ ಒಬ್ಬನಾಗಿದ್ದಾನೆ.

ಗಣಿತ ಹಾಗೂ ರಸಾಯನಶಾಸ್ತ್ರ ಇಷ್ಟಪಡುವ ಬಾರ್ನಬಿ ಸ್ವಿನ್ಬುರ್ನೆ ಪ್ರೋಗ್ರಾಮರ್‌ ಆಗುವ ಆಸೆ ಹೊಂದಿದ್ದಾನೆ. ಅದಾಗಲೇ ವಿವಿ ಕೋರ್ಸ್‌ಗಳನ್ನು ಎಡತಾಕುತ್ತಿರುವ ಬಾರ್ನಬಿ ಸ್ವಿನ್ಬುರ್ನೆ ಆಕ್ಸ್‌ಫರ್ಡ್ ವಿವಿಯಲ್ಲಿ ಸೇರುವ ಆಸೆ ಹೊಂದಿದ್ದಾನೆ.

ಶೇರು ಮಾರುಕಟ್ಟೆಯನ್ನೂ ಗಮನಿಸುವ ಬಾರ್ನಬಿ ಸ್ವಿನ್ಬುರ್ನೆ ತನ್ನ ಕ್ರಿಸ್ಮಸ್ ಉಡುಗೊರೆಯಾಗಿ, ಅದರ ಪಾಲಿನ ದುಡ್ಡನ್ನು ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಲು ತನ್ನ ಹೆತ್ತವರಿಗೆ ತಿಳಿಸಿದ್ದಾನೆ.

ಇದೇ ಮೆನ್ಸಾ ಪರೀಕ್ಷೆಯಲ್ಲಿ ಭಾರತದ ಕೆಲ ಮಕ್ಕಳು ಸಹ ಐಕ್ಯೂ 162 ಸ್ಕೋರ್‌ ಮಾಡಿದ್ದಾರೆ. ರಾಹುಲ್, ರಾಜ್ಗೌರಿ, ಅರ್ನವ್‌ ಶರ್ಮಾ ಎಂಬ ಮಕ್ಕಳು ಇಷ್ಟೇ ಅಂಕಗಳಿಸಿ 2017ರಲ್ಲಿ ಭಾರೀ ಸುದ್ದಿ ಮಾಡಿದ್ದರು. 2018ರಲ್ಲಿ 10 ವರ್ಷದ ಮೇಹುಲ್ ಗಾರ್ಗ್ ಹೆಸರಿನ ಪೋರ ಮೆನ್ಸಾ ಪರೀಕ್ಷೆಯಲ್ಲಿ ಐಕ್ಯೂ 162 ಸ್ಕೋರ್‌ ಮಾಡಿದ್ದ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...