ಮಹಾನಗರಗಳ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ಫಾರ್ಮಲ್ ಡ್ರೆಸ್ ಕೋಡ್, ಟೈ ಬಳಕೆ ಸಾಮಾನ್ಯ. ಆದರೆ ಈ ಟೈ ಕಟ್ಟಿಕೊಳ್ಳುವುದು ಬಹುತೇಕರಿಗೆ ಕಿರಿಕಿರಿ ವಿಷಯ.
ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಕೇವಲ 10 ಸೆಕೆಂಡ್ ಒಳಗಾಗಿ ಟೈ ಸುತ್ತು ಬರಿಸಿ ಕಟ್ಟಿಕೊಳ್ಳಲು ಸಿದ್ಧಮಾಡಿಕೊಳ್ಳಲು ಟೆಕ್ನಿಕ್ ತಿಳಿಸಿಕೊಡಲಾಗಿದೆ.
ವ್ಯಕ್ತಿಯೊಬ್ಬ ತನ್ನ ಅಂಗೈನಲ್ಲಿ ಟೈಯನ್ನು ಎರಡು ಸುತ್ತುಬರಿಸಿ, ಪರಿರ್ಪೂಣವಾದ ಗಂಟು ರಚಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಟೈ ಹಾಕಿಕೊಳ್ಳುವುದು ಇಷ್ಟೊಂದು ಸಲೀಸಾ ಎಂದೆನಿಸುತ್ತದೆ. ಈ ವಿಧಾನದಿಂದ ಕಚೇರಿಗೆ ತಯಾರಾಗುತ್ತಿರುವಾಗ ಟೈಕಟ್ಟಿಕೊಳ್ಳಲು ಹೆಚ್ಚುವರಿ ಸಮಯವನ್ನು ಕಳೆಯುವ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾಗಿಲ್ಲ ಎಂದು ಸಂದೇಶ ನೀಡಲಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು 4 ಮಿಲಿಯನ್ ವೀಕ್ಷಣೆ ಕಂಡಿದೆ. “ನನ್ನ ಬೆಳಗಿನ ಸಮಯವು ಇದರಿಂದ ತುಂಬಾ ಸುಲಭವಾಗುತ್ತದೆ’ ಎಂದು ಒಬ್ಬ ಟ್ವೀಟ್ ಬಳಕೆದಾರರು ವಿಡಿಯೊವನ್ನು ಶೇರ್ ಮಾಡಿದ್ದಾರೆ. ಮತ್ತೊಬ್ಬರು “ನನ್ನ ಸಂರ್ಪೂಣ ಶಾಲಾ ವೃತ್ತಿ ಜೀವನ ಎಲ್ಲಿತ್ತು’ ಎಂದು ಕಾಮೆಂಟ್ ಮಾಡಿದ್ದಾರೆ.
https://twitter.com/Mirexshotz/status/1548950259501514752?ref_src=twsrc%5Etfw%7Ctwcamp%5Etweetembed%7Ctwterm%5E1548950259501514752%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fthis-10-second-genius-tie-knot-hack-will-make-you-question-your-life-5583391.html