ಕೋವಿಡ್ ನೆವದಲ್ಲಿ ಎಲ್ಲಾ ಸರಕುಗಳು ಮತ್ತು ಸೇವೆಗಳ ಬೆಲೆಗಳಲ್ಲಿ ಏರಿಕೆಯಾಗುತ್ತಿರುವ ನಡುವೆ ವಿಮಾ ಕಂಪನಿಗಳು ಸಹ ಇದೇ ಭರದಲ್ಲಿ ಒಂದಷ್ಟು ಬೆಲೆ ಏರಿಕೆಯಗಳಿಗೆ ಮುಂದಾಗಿವೆ.
ಮೂರನೇ ಪಾರ್ಟಿ ಮೋಟರ್ ವಿಮೆಯ ಪ್ರೀಮಿಯಂಗಳ ಬೆಲೆಯಲ್ಲಿ 15-20 ಪ್ರತಿಶತದಷ್ಟು ಏರಿಕೆ ಮಾಡಲು ಅನುಮತಿ ಕೋರಿ ವಿಮಾ ಕಂಪನಿಗಳು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡೆಐ) ಅನುಮತಿ ಕೋರಿವೆ.
ತೋರಿಸಿಕೊಳ್ಳುವ ರೀತಿಯಲ್ಲೇ ಸಿಟ್ಟಾದ ಮೋದಿ: ನಾನು ಜೀವಂತವಾಗಿ ತಲುಪಿದ್ದಕ್ಕೆ ನಿಮ್ಮ ಸಿಎಂಗೆ ಧನ್ಯವಾದ ಎಂದು ವ್ಯಂಗ್ಯ
ಸಾಂಕ್ರಮಿಕಕ್ಕೂ ಮುನ್ನವೇ ಮೂರನೇ ಪಾರ್ಟಿ ಮೋಟರ್ ವಿಮೆಯ ಪ್ರೀಮಿಯಂಗಳಲ್ಲಿ ಏರಿಕೆ ಮಾಡಲು ವಿಮಾ ಸಂಸ್ಥೆಗಳು ನಿರ್ಧರಿಸಿದ್ದವು ಎಂದು ವರದಿಗಳು ತಿಳಿಸಿವೆ. ಆದರೆ ಕೋವಿಡ್-19 ಕಾರಣದಿಂದಾಗಿ ಈ ಪ್ಲಾನ್ ಕೈಗೂಡಿರಲಿಲ್ಲ.
ಪ್ರಸಕ್ತ ಪ್ರೀಮಿಯಂ ದರಗಳು ಸಾಕಾಗುತ್ತಿಲ್ಲ ಎಂದು ನಂಬಿರುವ ಸಾಮಾನ್ಯ ವಿಮಾ ಸೇವೆಗಳ 25ರಷ್ಟು ಸೇವಾದಾರರಿಗೆ ಪ್ರೀಮಿಯಂ ದರಗಳ ಏರಿಕೆ ಸಂಬಂಧ ಐಆರ್‌ಡಿಎಐನಿಂದ ಅನುಮತಿ ಸಿಗುವ ನಿರೀಕ್ಷೆ ಇದೆ.
ಒಂದು ವೇಳೆ ಈ ಪ್ರಸ್ತಾವನೆಗೆ ಐಆರ್‌ಡಿಎಐ ಅನುಮೋದನೆ ಕೊಟ್ಟಲ್ಲಿ, ವಾಹನ ಖರೀದಿದಾರಿಗೆ ಮೂರನೇ ಪಾರ್ಟಿ ವಿಮಾ ಪ್ರೀಮಿಯಂ ರೂಪದಲ್ಲಿ ಇನ್ನಷ್ಟು ಹೆಚ್ಚಿನ ಮೊತ್ತ ಪೀಕಬೇಕಾಗಿ ಬರುವ ಕಾರಣ ವಾಹನ ಖರೀದಿ ಇನ್ನಷ್ಟು ದುಬಾರಿಯಾಗಲಿದೆ.