alex Certify ಹಳೆ ಬಟ್ಟೆಗಳನ್ನು ಬೇರೆಯವರಿಗೆ ಕೊಡಲು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಬಟ್ಟೆಗಳನ್ನು ಬೇರೆಯವರಿಗೆ ಕೊಡಲು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಈ 3 ವಸ್ತುಗಳನ್ನು ಯಾವುದೇ ಕಾರಣಕ್ಕೂ ಮಂಗಳ ಮುಖಿಯರಿಗೆ ದಾನ ಮಾಡಬೇಡಿ – Logical Kannadiga

ಪ್ರತಿದಿನ ಧರಿಸುವ ಯಾವುದೇ ಬಟ್ಟೆ ಆಗಿರಬಹುದು ಹೆಚ್ಚೆಂದರೆ ಎರಡು ವರ್ಷ ಉಪಯೋಗಿಸಿದ ನಂತರ ಹಳತು ಅನ್ನಿಸಲು ಶುರುವಾಗುತ್ತದೆ. ಹಳೆಯ ಬಟ್ಟೆಗಳನ್ನು ಕೆಲವರು ಎಸೆದುಬಿಡಬಹುದು. ಇನ್ನೂ ಕೆಲವರು ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಹೊಸ ರೂಪ ಕೊಡಲು ಯೋಚಿಸಬಹುದು. ಬಹುತೇಕ ಜನರು ಹಳೆಯ ಬಟ್ಟೆಗಳನ್ನು ನೆಲ ಒರೆಸಲು, ಮನೆ ಅಥವಾ ವೆಹಿಕಲ್ ಧೂಳು ಒರೆಸಲು ಉಪಯೋಗಿಸುತ್ತಾರೆ.

ಹೊಸ ಬಟ್ಟೆಗಳನ್ನು ಆಗಾಗ ಖರೀದಿ ಮಾಡುವವರಿಗೆ ಅಷ್ಟೇನೂ ಹಳೆಯದಾಗಿರದ ಬಟ್ಟೆಗಳನ್ನು ಹೀಗೆ ಎಸೆಯಲು ಮನಸ್ಸಾಗುವುದಿಲ್ಲ. ಆಗ ಪರಿಚಯದವರಿಗೋ, ಹತ್ತಿರದವರಿಗೋ ನಾವು ಉಪಯೋಗಿಸದೆ ಇರುವ ಬಟ್ಟೆಗಳನ್ನು ಕೊಡಲು ಮುಂದಾಗುತ್ತೇವೆ. ಇಂತಹ ಸಂಧರ್ಭದಲ್ಲಿ ಕೆಲವು ಅಗತ್ಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

* ನಾವು ಯಾರಿಗೆ ಹಳೆಯ ಬಟ್ಟೆ ಕೊಡಲು ಮುಂದಾದಾಗ ಒಂದೆರಡು ದಿನ ಮೊದಲೇ ಅವರ ಬಳಿ ಅಭಿಪ್ರಾಯ ಕೇಳಿ, ಒಪ್ಪಿಗೆ ಪಡೆದು ನಂತರ ಬಟ್ಟೆ ಕೊಡುವುದು ಒಳ್ಳೆಯದು. ಏಕಾಏಕಿ ನಮ್ಮ ಹಳೆಯ ಬಟ್ಟೆಗಳನ್ನು ಅವರ ಕೈಗೆ ಇಟ್ಟುಬಿಟ್ಟರೆ ಇಷ್ಟವಿಲ್ಲದವರಿಗೆ ಇಬ್ಬಂದಿಯಾಗಬಹುದು.

* ಯಾವ ಬಟ್ಟೆ ಕೊಡಲು ಮುಂದಾಗುತ್ತೇವೆಯೋ ಅದನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿ ನಂತರ ಕೊಡುವುದು ಒಳಿತು. ಹೊಲಿಗೆ ಬಿಚ್ಚಿದೆಯೇ, ಬಣ್ಣ ಮಾಸಿದೆಯೆ ಎಂದು ಸರಿಯಾಗಿ ಪರಿಶೀಲಿಸಿ ಕೊಡಬೇಕು. ಒಂದು ವೇಳೆ ಬಟ್ಟೆಗಳಲ್ಲಿ ಅಂತಹ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಿ ಕೊಡುವುದು ಒಳಿತು.

* ಹೇಗೋ ನಮಗೆ ಬೇಡವಾದ ಬಟ್ಟೆ ತಾನೇ? ಎಂದು ಒಗೆಯದೆ ಯಾವ ಬಟ್ಟೆಯೂ ಕೊಡಬಾರದು. ಒಗೆದು, ಸರಿಯಾಗಿ ಮಡಚಿ, ಬಟ್ಟೆ ತೆಗೆದುಕೊಳ್ಳುವವರ ಗೌರವಕ್ಕೆ ಧಕ್ಕೆ ಬಾರದ ಹಾಗೆ, ಮನಸ್ಸಿಗೆ ನೋವುಂಟು ಮಾಡದ ಹಾಗೆ ಕೊಟ್ಟರೆ ಬಹಳ ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...