ನಗರ ಪ್ರದೇಶಗಳಲ್ಲಿ ಕಾರುಗಳ ಪಾರ್ಕಿಂಗ್ ಮಾಡುವುದು ಒಂದು ದೊಡ್ಡ ಸವಾಲು. ಅದರಲ್ಲೂ ಮೊದಲೇ ಪಾರ್ಕ್ ಆಗಿರುವ ಕಾರುಗಳ ನಡುವೆ ಸರಿಯಾಗಿ ನಿಮ್ಮ ಕಾರನ್ನು ತಂದು ನಿಲ್ಲಿಸುವುದು ಬಲೇ ನಾಜೂಕಿನ ಕೆಲಸ.
ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ʼಶಾಕ್ʼ
ಟಿಕ್ಟಾಕ್ನಲ್ಲಿ @bigbruva77 ಹೆಸರಿನ ಬಳಕೆದಾರರೊಬ್ಬರು ಪಾರ್ಕಿಂಗ್ ಸಮಸ್ಯೆಯನ್ನು ಸ್ಮಾರ್ಟ್ ಆಗಿ ಎದುರಿಸುವುದನ್ನು ತೋರಿಕೊಟ್ಟಿದ್ದಾರೆ. ಜನರಲ್ ಮೋಟರ್ಸ್ನ ಪಾರ್ಕಿಂಗ್ ಲಾಟ್ನಲ್ಲಿ ಕಾರುಗಳನ್ನು ಪಾರ್ಕ್ ಮಾಡಿರುವುದನ್ನು ವಿಡಿಯೋದಲ್ಲಿ ತೋರಿರುವ ಈತ, ಇದುವರೆಗೂ ನಾವೆಲ್ಲ ಪಾರ್ಕಿಂಗ್ ಮಾಡಬೇಕಾದ ರೀತಿಯನ್ನೇ ಕಲಿತಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.
ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!
ಪಾರ್ಕಿಂಗ್ ಜಾಗದ ಎಡಬದಿಯಲ್ಲಿ ಕಾರುಗಳನ್ನು ಪಾರ್ಕ್ ಮಾಡಲಾಗಿದ್ದು, ಪ್ರಯಾಣಿಕರಿಗೆ ತಮ್ಮ ಕಾರುಗಳ ಬಾಗಿಲುಗಳನ್ನು ತೆರೆಯಲು ಸಾಕಷ್ಟು ಜಾಗ ಇರುವಂತೆ ಖಾತ್ರಿ ಮಾಡಲಾಗಿದೆ. ಇದೇ ರೀತಿ ಎಲ್ಲರೂ ಅಳವಡಿಸಿಕೊಂಡಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಸಮಸ್ಯೆಯೇ ಬಾರದು ಎಂದು ಈತ ತನ್ನ ವಿಡಿಯೋ ಮೂಲಕ ವಿವರಿಸಿದ್ದಾನೆ.