alex Certify ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ

ಅಮೆರಿಕದಲ್ಲಿ ಕಳ್ಳನೊಬ್ಬ ತನ್ನ ಕೆಲಸದಲ್ಲಿ ವ್ಯಾಕ್ಸಿನೇಷನ್ ಮಹತ್ವ ಅರಿತು ಗಮನ ಸೆಳೆದು ವಿಶ್ವದಲ್ಲೇ ಸುದ್ದಿಯಾಗಿದ್ದಾನೆ.

ಕೇಟಿ ರೇಗನ್ ಎಂಬ ಮಹಿಳೆಯ ಕಾರಿಗೆ ಕಳ್ಳನೊಬ್ಬ ನುಗ್ಗಿ ಆಕೆಯ ವ್ಯಾಲೆಟ್ ಕದ್ದಿದ್ದಾನೆ. ಆದಾಗ್ಯೂ, ಅವಳ ವ್ಯಾಕ್ಸಿನೇಷನ್ ಕಾರ್ಡ್ ಅನ್ನು ಅಲ್ಲಿಯೇ ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾನೆ.

SBI ಗ್ರಾಹಕರೇ ಗಮನಿಸಿ: ಕೆಲ ಸೇವೆಯಲ್ಲಿ ವ್ಯತ್ಯಯ

ಇಲ್ಲಿ ಪ್ರಮುಖ ವಿಷಯವೆಂದರೆ ಅಮೆರಿಕದಲ್ಲಿ ವ್ಯಾಕ್ಸಿನೇಷನ್ ಕಾರ್ಡ್ ಕೆಲವು ಅನ್ಯ ನಗರಗಳ ಪ್ರವೇಶ ಹಾಗೂ ಉದ್ಯೋಗ ಪಡೆದುಕೊಳ್ಳಲು ಅತಿಮುಖ್ಯವಾದ ದಾಖಲೆಯಾಗಿದೆ.

ಈ ಪ್ರಕರಣದಲ್ಲಿ ಮಹಿಳೆ ಅದೃಷ್ಟಶಾಲಿ ತನ್ನ ವ್ಯಾಲೆಟ್ ಕಳೆದುಕೊಂಡ ಆತಂಕದ ನಡುವೆಯೂ ವ್ಯಾಕ್ಸಿನೇಷನ್ ಕಾರ್ಡ್ ಉಳಿಸಿಕೊಂಡ ಸಮಾಧಾನ ಆಕೆಗೆ‌ ಸಿಕ್ಕಿದೆ.

ಕಾರಿನ ಕಿಟಕಿಯನ್ನು ಒಡೆದು ಹಾಕಿರುವ ವಿಡಿಯೋವನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇಟಿಯ ಪೋಸ್ಟ್ ಒಂದು ದಿನದಲ್ಲಿ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1.4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...