alex Certify ಫೇಸ್ ​ಬುಕ್​ ಲೈವ್​ ನಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು..! ಪತ್ರಕರ್ತನ ಮೊಬೈಲ್​ ಕದ್ದು ಸಿಕ್ಕಿಬಿದ್ದ ಪರಿಯೇ ರೋಚಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ ​ಬುಕ್​ ಲೈವ್​ ನಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು..! ಪತ್ರಕರ್ತನ ಮೊಬೈಲ್​ ಕದ್ದು ಸಿಕ್ಕಿಬಿದ್ದ ಪರಿಯೇ ರೋಚಕ

ಈಜಿಪ್ಟ್​ ರಾಜಧಾನಿ ಕೈರೋದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಪತ್ರಕರ್ತನ ಮೊಬೈಲ್​ ಕದ್ದು ಕಳ್ಳ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪತ್ರಕರ್ತ ಮೊಬೈಲ್​ನಲ್ಲಿ ಭೂಕಂಪದ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಳ್ಳನ ಮುಖವನ್ನು ಬರೋಬ್ಬರಿ 20 ಸಾವಿರ ಮಂದಿ ನೋಡಿದ್ದಾರೆ.

ಫೇಸ್​ಬುಕ್​ನಲ್ಲಿ ಕಳ್ಳನ ಕರಾಮತ್ತು ಲೈವ್​ ಸ್ಟ್ರೀಮ್​ ಆಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕೈರೋದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಫೇಸ್​ಬುಕ್​ ಲೈವ್​ ಮೂಲಕ ಪತ್ರಕರ್ತ ವರದಿ ನೀಡುತ್ತಿದ್ದರು. ಆದರೆ ಎಲ್ಲಿಂದಲೂ ಬಂದ ಕಳ್ಳ ಈ ಮೊಬೈಲ್​ ಫೋನ್​ ನ್ನು ಎಗರಿಸಿದ್ದಾನೆ. ಕಳ್ಳ ಬೈಕ್​​ ಸವಾರಿ ಮಾಡುತ್ತಾ ಸಿಗರೇಟ್​ ಸೇದುತ್ತಿರುವ ದೃಶ್ಯ ಕೂಡ ಲೈವ್​ ಸ್ಟ್ರೀಮ್​ನಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್​ ಆದ ಬಳಿಕ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಲೈವ್​ ಕಳ್ಳತನದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ 6.2 ಮಿಲಿಯನ್​ ವೀವ್ಸ್​​ ಸಂಪಾದಿಸಿದೆ. ಈ ಲೈವ್​ ಕಳ್ಳತನದ ವಿಡಿಯೋ ಸೋಶಿಯಲ್​ ಮೀಡಿಯಾದ ಬಹುತೇಕ ವೇದಿಕೆಗಳಲ್ಲಿ ಸದ್ದು ಮಾಡ್ತಿದೆ.

— Yasmin Mahmoud (@M49828376Yasmin) October 19, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...