ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಪತ್ರಕರ್ತನ ಮೊಬೈಲ್ ಕದ್ದು ಕಳ್ಳ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪತ್ರಕರ್ತ ಮೊಬೈಲ್ನಲ್ಲಿ ಭೂಕಂಪದ ವರದಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಳ್ಳನ ಮುಖವನ್ನು ಬರೋಬ್ಬರಿ 20 ಸಾವಿರ ಮಂದಿ ನೋಡಿದ್ದಾರೆ.
ಫೇಸ್ಬುಕ್ನಲ್ಲಿ ಕಳ್ಳನ ಕರಾಮತ್ತು ಲೈವ್ ಸ್ಟ್ರೀಮ್ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೈರೋದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಫೇಸ್ಬುಕ್ ಲೈವ್ ಮೂಲಕ ಪತ್ರಕರ್ತ ವರದಿ ನೀಡುತ್ತಿದ್ದರು. ಆದರೆ ಎಲ್ಲಿಂದಲೂ ಬಂದ ಕಳ್ಳ ಈ ಮೊಬೈಲ್ ಫೋನ್ ನ್ನು ಎಗರಿಸಿದ್ದಾನೆ. ಕಳ್ಳ ಬೈಕ್ ಸವಾರಿ ಮಾಡುತ್ತಾ ಸಿಗರೇಟ್ ಸೇದುತ್ತಿರುವ ದೃಶ್ಯ ಕೂಡ ಲೈವ್ ಸ್ಟ್ರೀಮ್ನಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆದ ಬಳಿಕ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಲೈವ್ ಕಳ್ಳತನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ 6.2 ಮಿಲಿಯನ್ ವೀವ್ಸ್ ಸಂಪಾದಿಸಿದೆ. ಈ ಲೈವ್ ಕಳ್ಳತನದ ವಿಡಿಯೋ ಸೋಶಿಯಲ್ ಮೀಡಿಯಾದ ಬಹುತೇಕ ವೇದಿಕೆಗಳಲ್ಲಿ ಸದ್ದು ಮಾಡ್ತಿದೆ.
https://twitter.com/i/status/1450439435175305220