ನಾವು ಪಾದಗಳನ್ನು ನಿರ್ಲಕ್ಷಿಸುತ್ತೇವೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಇದರಿಂದ ಪಾದಗಳು ಒಣಗುತ್ತವೆ. ಅವುಗಳ ಮೇಲೆ ಕೊಳೆ ಕುಳಿತುಕೊಳ್ಳುತ್ತದೆ. ಇದನ್ನು ಗಟ್ಟಿಯಾಗಿ ಉಜ್ಜಿದಾಗ ರಕ್ತಸ್ರಾವವಾಗುತ್ತದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಈ ಕಲ್ಲನ್ನು ಬಳಸಿ.
ಚರ್ಮದಿಂದ ಕೊಳೆಯನ್ನು ತೆಗೆಯಲು ಪ್ಯೂಮಿಕ್ ಕಲ್ಲನ್ನು ಬಳಸಲಾಗುತ್ತದೆ. ಇದರಿಂದ ಆರಾಮದಾಯಕವಾಗಿ ಪಾದದ ಸ್ಕ್ರಬಿಂಗ್ ಮಾಡಬಹುದು. ಇದನ್ನು ಬಳಸುವ ಸರಿಯಾದ ಮಾರ್ಗ ಇಲ್ಲಿದೆ.
ಒಂದು ಬಕೆಟ್ ಉಗುರು ಬೆಚ್ಚಗಿರುವ ನೀರಿಗೆ ಶಾಂಪು ಸೇರಿಸಿ 10-15 ನಿಮಿಷ ನಿಮ್ಮ ಕಾಲನ್ನು ನೆನೆಸಿಡಿ. ಬಳಿಕ ಪ್ಯೂಮಿಕ್ ಕಲ್ಲನ್ನು ಕೆಲವು ಸೆಕೆಂಡುಗಳ ಕಾಲ ಮುಳುಗಿಸಿ. ಇದರಿಂದ ಚರ್ಮದ ಮೇಲೆ ಸುಲಭವಾಗಿ ಉಜ್ಜಬಹುದು. ಬಳಿಕ ಪಾದವನ್ನು ಹೊರಗೆ ತೆಗೆದು ಪ್ಯೂಮಿಕ್ ಕಲ್ಲಿನಿಂದ 5 ನಿಮಿಷ ವೃತ್ತಾಕಾರದಲ್ಲಿ ಉಜ್ಜಿ. ಬಳಿಕ ನೀರಿನಲ್ಲಿ ತೊಳೆದು ಒರೆಸಿಕೊಳ್ಳಿ. ಕೊನೆಯಲ್ಲಿ ಮಾಯಿಶ್ಚರೈಸರ್ ಕ್ರಿಂ ಹಚ್ಚಿ. ಇದರಿಂದ ಪಾದಗಳು ಕ್ಲೀನ್ ಆಗಿ ಮೃದುವಾಗಿ ಹೊಳೆಯುತ್ತವೆ.