ಮೊಸರು ಆರೋಗ್ಯಕ್ಕೆ ಒಳ್ಳೆಯದು. ಅನೇಕರು ಪ್ರತಿ ದಿನ ಎರಡು ಬಾರಿ ಮೊಸರು ಸೇವನೆ ಮಾಡ್ತಾರೆ. ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳಿಗೆ ಪ್ರಯೋಜನಕಾರಿ. ಮೊಸರನ್ನು ನಿಯಮಿತವಾಗಿ ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಮತ್ತು ಅಧಿಕ ಬಿಪಿಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದರೆ ಕೆಲವರು ಮೊಸರಿನಿಂದ ದೂರವಿರುವುದು ಒಳ್ಳೆಯದು. ಪ್ರತಿದಿನ ಅಗತ್ಯಕ್ಕಿಂತ ಹೆಚ್ಚು ಮೊಸರನ್ನು ಸೇವಿಸಿದರೆ ಸಮಸ್ಯೆ ಎದುರಾಗುತ್ತದೆ.
ಮೊಸರಿನ ಸೇವನೆಯು ಮೂಳೆಗಳು ಮತ್ತು ಹಲ್ಲುಗಳಿಗೆ ಒಳ್ಳೆಯದು. ಆದರೆ ಮೊಸರು, ಸಂಧಿವಾತ ರೋಗಿಗಳಿಗೆ ಹಾನಿಕಾರಕ. ಸಂಧಿವಾತ ರೋಗಿಗಳು ನಿಯಮಿತವಾಗಿ ಮೊಸರು ತಿನ್ನುವುದನ್ನು ತಪ್ಪಿಸಬೇಕು. ಇದು ನೋವಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಉಸಿರಾಟದ ಸಮಸ್ಯೆ ಅಥವಾ ಅಸ್ತಮಾದಿಂದ ಬಳಲುತ್ತಿದ್ದರೆ ಮೊಸರು ಸೇವನೆ ಮಾಡಬಾರದು. ಹಗಲಿನಲ್ಲಿ ಮೊಸರು ಸೇವನೆ ಮಾಡಿದ್ರೂ ರಾತ್ರಿ ಮೊಸರು ಸೇವನೆ ಮಾಡಬಾರದು.
ಅಸಿಡಿಟಿ ಸಮಸ್ಯೆ ಇರುವವರು ಮೊಸರನ್ನು ಸೇವಿಸಬಾರದು. ವಿಶೇಷವಾಗಿ ರಾತ್ರಿ ಮೊಸರು ಸೇವನೆ ಮಾಡಬಾರದು.