alex Certify ಹೊರಗೆ ಹೋಗುವಾಗ ʼಹ್ಯಾಂಡ್ ಬ್ಯಾಗ್ʼ ನಲ್ಲಿರಲಿ ಈ ಮುಖ್ಯ ವಸ್ತುಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊರಗೆ ಹೋಗುವಾಗ ʼಹ್ಯಾಂಡ್ ಬ್ಯಾಗ್ʼ ನಲ್ಲಿರಲಿ ಈ ಮುಖ್ಯ ವಸ್ತುಗಳು….!

ಹೊರಗೆ ಹೋಗುವಾಗ ಸೆಲ್ ಫೋನ್, ದುಡ್ಡನ್ನು ಇಡಲು ಹ್ಯಾಂಡ್ ಬ್ಯಾಗ್ ಗಳನ್ನು ಕೊಂಡೊಯ್ಯುವುದು ಸಹಜ. ಆದರೆ ಆ ಬ್ಯಾಗ್ ನಲ್ಲಿ ಮನಿ ಮೊಬೈಲ್ ಜೊತೆಗೆ ಈ ಎಲ್ಲಾ ವಸ್ತುಗಳಿದ್ದರೆ ಖಂಡಿತ ಪ್ರಯೋಜನಕ್ಕೆ ಬರುತ್ತವೆ.

* ಬೆವರನ್ನು ಬಹಳಷ್ಟು ಜನರು ಕೈಯಿಂದಲೇ ಒರೆಸಿಕೊಳ್ಳುತ್ತಾರೆ. ಕೈಯಲ್ಲಿರುವ ಕೊಳೆ ಚರ್ಮಕ್ಕೆ ಸೇರ್ಪಡೆಯಾಗುತ್ತದೆ. ಆದ್ದರಿಂದ ಸದಾ ಟಿಶ್ಯೂ ಬ್ಯಾಗ್ ನಲ್ಲಿ ಇರುವುದು ಅತ್ಯಗತ್ಯ. ಹೊರಗೆ ಬಿಸಿಲಿಗೆ ಹೋದಾಗ ತಪ್ಪದೆ ವೆಟ್ ಟಿಶ್ಯೂ ಬಳಸಿ ಮುಖವನ್ನು ಒರೆಸಿಕೊಂಡಲ್ಲಿ ಜಿಡ್ಡಿನ ಸಮಸ್ಯೆ ಎದುರಾಗದು.

* ಕೈಗಳನ್ನು ಶುದ್ಧಗೊಳಿಸಿಕೊಳ್ಳಲು ಚಿಕ್ಕ ಸ್ಯಾನಿಟೈಸರ್ ಡಬ್ಬ ಇರಬೇಕು. ಕೆಲವರಿಗೆ ಬೇಗ ಸೋಂಕಿನ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅನಾರೋಗ್ಯವೂ ಎದುರಾಗುತ್ತದೆ. ಆದ್ದರಿಂದ ಏನನ್ನಾದರೂ ತಿನ್ನುವ ಮುನ್ನ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಿ ಕೊಳ್ಳುವ ಅಭ್ಯಾಸಕ್ಕೆ ಆದ್ಯತೆ ನೀಡಬೇಕು.

* ಬಿಸಿಲು ಹೆಚ್ಚಾದರೆ ಡಿಹೈಡ್ರೇಷನ್ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತದೆ. ಆದ್ದರಿಂದ ನೀರಿನ ಬಾಟಲಿಯನ್ನು ಜೊತೆಯಲ್ಲಿಟ್ಟುಕೊಂಡಿರಬೇಕು. ಸಾಧ್ಯವಾದರೆ ಸೌತೆಕಾಯಿಯ ಚೂರುಗಳನ್ನು ಇಟ್ಟುಕೊಳ್ಳಬಹುದು. ಇವು ದೇಹಕ್ಕೆ ನೀರಿನ ಪ್ರಮಾಣ ನೀಡುತ್ತದೆ.

* ಬ್ಯಾಗ್ ನಲ್ಲಿ ಚಿಕ್ಕ ನ್ಯಾಪ್ ಕಿನ್ ಇಟ್ಟುಕೊಳ್ಳಬೇಕು. ತಣ್ಣನೆಯ ನೀರಿನಲ್ಲಿ ಅದ್ದಿ ಆಗಾಗ ಮುಖ ಒರೆಸಿಕೊಳ್ಳುತ್ತಿರಬೇಕು. ಈ ರೀತಿ ಮಾಡಿದರೆ ಮುಖ ಹಾಯಾಗುತ್ತದೆ. ಆಲಸಿಕೆ ದೂರವಾಗುತ್ತದೆ.

* ಕಣ್ಣುಗಳ ರಕ್ಷಣೆಗಾಗಿ ಗ್ಲಾಸ್ ಗಳನ್ನು ತಪ್ಪದೆ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕು. ಅದರ ಜೊತೆ ಒಂದು ಕಾಟನ್ ಸ್ಕಾರ್ಫ್ ಸಹಿತ ಅತ್ಯಗತ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...