ಎಮೋಜಿಗಳು ಸಂಭಾಷಣೆಯ ಒಂದು ಭಾಗವಾಗಿವೆ. ಅತೀ ಹೆಚ್ಚಿನ ಜನರು ಫೋನ್ ಮೂಲಕ ವಾಟ್ಸಾಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಮೋಜಿಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಹೀಗಾಗಿಯೇ ಹೊಸ ಹೊಸ ಎಮೋಜಿಗಳು ಕೂಡ ಬಳಕೆಗೆ ಬರುತ್ತಿವೆ. ಈ ನಿಟ್ಟಿನಲ್ಲಿ 2021ರಲ್ಲಿ ನೋಡುವುದಾದರೆ ಅತೀ ಹೆಚ್ಚು ಬಳಕೆಯಾಗಿರುವ ಎಮೋಜಿಗಳನ್ನು ಯುನಿಕೋಡ್ ಕನ್ಸೋರ್ಟಿಯಮ್ ಬಿಡುಗಡೆ ಮಾಡಿದೆ.
ಈ ಸಂಸ್ಥೆ ಅತಿ ಹೆಚ್ಚು ಬಳಕೆಯಾಗಿರುವ 100 ಎಮೋಜಿಗಳನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ ಕಣ್ಣೀರಿನ ಮುಖ ಚಿತ್ರಿಸಿರುವ ಎಮೋಜಿ ಅತೀ ಹೆಚ್ಚು ಜನಪ್ರಿಯವಾಗಿದೆ. ವಿಶ್ವದ ಆನ್ ಲೈನ್ ಜನಸಂಖ್ಯೆಯ ಶೇ.32 ರಷ್ಟು ಜನರು ಎಮೋಜಿಗಳನ್ನು ಬಳಸುತ್ತಿದ್ದಾರೆ ಎಂದು ಈ ಸಂಸ್ಥೆ ಹೇಳಿದೆ.
ಅಪ್ಪನ ಕೈ ಹಿಡಿದಿರುವ ಮಗನ ಫೋಟೋ ಶೇರ್ ಮಾಡಿಕೊಂಡ ನಟಿ ನುಸ್ರತ್ ಜಹಾನ್
ಒಟ್ಟು ಚಾಲ್ತಿಯಲ್ಲಿರುವ 3,663 ಎಮೋಜಿಗಳಲ್ಲಿ 100ರಷ್ಟು ಎಮೋಜಿಗಳು ಶೇ.82ರಷ್ಟು ಬಳಕೆಯಲ್ಲಿವೆ ಎಂದು ಸಂಸ್ಥೆ ಹೇಳಿದೆ. ಆ ಪೈಕಿ 10 ಎಮೋಜಿಗಳು ಹೆಚ್ಚು ಬಳಕೆಯಲ್ಲಿವೆ. ಈ ಪೈಕಿ ಕಣ್ಣೀರಿನ ಮುಖವಿರುವ ಎಮೋಜಿ ಹೆಚ್ಚು ಬಳಕೆಯಲ್ಲಿದೆ. ಎರಡನೇ ಸ್ಥಾನದಲ್ಲಿ ಕೆಂಪು ಹೃದಯದ ಎಮೋಜಿ ಇದೆ. ನೆಲದ ಮೇಲೆ ಉರುಳಾಡಿ ನಗುವಂತಹ ಎಮೋಜಿ ಮೂರನೇ ಸ್ಥಾನದಲ್ಲಿದೆ.
ನಾಲ್ಕನೇ ಸ್ಥಾನದಲ್ಲಿ ಕೈ ಮೇಲೆ ಮಾಡಿರುವ ಥಮ್ಸ್ ಆಪ್ ಎಮೋಜಿ ನಾಲ್ಕನೇ ಸ್ಥಾನದಲ್ಲಿದೆ. ಜೋರಾಗಿ ಅಳುವ ಮುಖದ ಎಮೋಜಿ 5ನೇ ಸ್ಥಾನದಲ್ಲಿದೆ. ಮಡಚಿದ ಕೈಗಳಿರುವ ಎಮೋಜಿ 6ನೇ ಸ್ಥಾನದಲ್ಲಿದೆ. ಮುತ್ತು ಕಳುಹಿಸುತ್ತಿರುವ ಎಮೋಜಿ 7ನೇ ಸ್ಥಾನದಲ್ಲಿದೆ. ಹೃದಯದಿಂದ ನಗುತ್ತಿರುವ ಮುಖದ ಎಮೋಜಿ 8ನೇ ಸ್ಥಾನದಲ್ಲಿದೆ. ತೆರೆದ ಹೃದಯದಿಂದ ನಗುವ ಎಮೋಜಿ 9ನೇ ಸ್ಥಾನದಲ್ಲಿದೆ. ಕಣ್ಣುಗಳನ್ನು ತೆರೆದು ನಗುವ ಮುಖ ಹೊತ್ತಿರುವ ಎಮೋಜಿ ಈ ಬಾರಿ 10ನೇ ಸ್ಥಾನದಲ್ಲಿದೆ.