ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಅಸಿಡಿಟಿ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸಿರುತ್ತೀರಿ. ಇದರಿಂದ ಹೊರಬರುವ ಕೆಲವು ಮನೆಮದ್ದುಗಳು ಇಲ್ಲಿವೆ ಕೇಳಿ.
ಸಕ್ಕರೆ ಬೆರೆಸದ, ಸ್ವಲ್ಪವೂ ಬೆಚ್ಚಗಿರದ ತಣ್ಣನೆಯ ಹಾಲನ್ನು ರಾತ್ರಿ ಮಲಗುವ ಮುನ್ನ ಅಥವಾ ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಆಸಿಡಿಟಿ ಸಮಸ್ಯೆ ದೂರವಾಗುತ್ತದೆ.
ಲವಂಗದ ಒಂದು ತುಂಡನ್ನು ಬಾಯಿಯಲ್ಲಿ ಹಾಕಿ ಜಗಿಯುತ್ತಾ ಇರುವುದರಿಂದ ಆಸಿಡಿಟಿ ಸಮಸ್ಯೆ ಮತ್ತು ಹುಳಿತೇಗು ಅಥವಾ ವಾಕರಿಕೆಯ ಸಮಸ್ಯೆ ದೂರವಾಗುತ್ತದೆ. ಬಾಯಿಯ ದುರ್ಗಂಧವನ್ನು ದೂರ ಮಾಡಲೂ ಇದು ಸಹಕಾರಿ.
ಓಂಕಾಳು ಹೃದಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುತ್ತದೆ. ಇದನ್ನು ಬೆಚ್ಚಗಿನ ನೀರಿಗೆ ಹಾಕಿ ಸ್ವಲ್ಪ ಹೊತ್ತು ಮುಚ್ಚಿಟ್ಟು ತಣ್ಣಗಾದ ಬಳಿಕ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.