ಪಪ್ಪಾಯದ ಹಣ್ಣುಗಳೆಂದರೆ ಎಲ್ಲರಿಗೂ ಬಲು ಇಷ್ಟ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
ಪಪ್ಪಾಯಿ ಬೀಜಗಳಿಂದ ಯಕೃತ್ ನ ಖಾಯಿಲೆ ಅಂದರೆ ಲಿವರ್ ನ ಸಮಸ್ಯೆಗಳನ್ನು ತಡೆಗಟ್ಟಬಹುದು. ಡಿಟಾಕ್ಸಿಂಗ್ ಪರಿಣಾಮ ಇದು ಯಕೃತ್ ಅನ್ನು ಸ್ವಚ್ಛಗೊಳಿಸುತ್ತದೆ. ಇನ್ನು ಆಂಟಿ ಬ್ಯಾಕ್ಟೀರಿಯಾ ಗುಣ ಹೊಂದಿರುವ ಇದು ಬ್ಯಾಕ್ಟೀರಿಯಾವನ್ನು ಸಾಯಿಸುತ್ತದೆ. ವೈರಲ್ ಸೋಂಕುಗಳನ್ನು ತಡೆಗಟ್ಟುತ್ತದೆ. ಅದರೊಂದಿಗೆ ಕ್ಯಾನ್ಸರ್ ಗೆ ಉತ್ತಮ ಮನೆ ಮದ್ದು ಎನ್ನುತ್ತದೆ ಇತ್ತೀಚಿನ ಸಂಶೋಧನೆ.
ಪರಾವಲಂಬಿಗಳನ್ನು ಇದು ದೂರ ಮಾಡುತ್ತದೆ, ಅಂದರೆ ಪಪ್ಪಾಯಿ ಬೀಜಗಳು ಕರುಳಿನ ಹುಳಗಳು ಮತ್ತು ಅಮಿಬಾದಂತಹ ಪರಾವಲಂಬಿಗಳು ಕೊಲ್ಲುವ ಕಾರ್ಪೈನ್ ಅನ್ನು ಹೊಂದಿದೆ. ಹೊಟ್ಟೆ ನೋವು, ಗಂಟಲು ನೋವು, ಉರಿಯೂತ, ಮೂತ್ರಪಿಂಡದ ಖಾಯಿಲೆ, ಅಜೀರ್ಣ ಸಮಸ್ಯೆ ಹೀಗೆ ಪ್ರಮುಖವಾದ ಹತ್ತು ಆರೋಗ್ಯ ಸಮಸ್ಯೆಗಳಿಗೆ ಈ ಪಪ್ಪಾಯಿ ಬೀಜ ಉತ್ತಮ ಮನೆ ಮದ್ದು.
ಐದಾರು ಪಪ್ಪಾಯಿ ಬೀಜಗಳನ್ನು ಪುಡಿ ಮಾಡಿ ಲಿಂಬೆ ರಸದೊಂದಿಗೆ ಒಂದು ತಿಂಗಳು ಸೇವಿಸಿ ನೋಡಿ. ನಿಮ್ಮ ಲಿವರ್ ಸಮಸ್ಯೆ ಕಡಿಮೆಯಾಗುವುದು ಖಚಿತ.