ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ.
* ಫ್ರಿಡ್ಜ್ ವಾಸನೆ ಬರುತ್ತಿದ್ದರೆ ಅದರೊಳಗೆ ಒಂದು ಕಪ್ ಕಾಫಿ ಚರಟ ಇಡಿ. ಇದರಿಂದ ವಾಸನೆ ಹೋಗಿ ನೈಸರ್ಗಿಕ ಪರಿಮಳ ಹೊರಹೊಮ್ಮುತ್ತದೆ.
* ಕಾಫಿಯಲ್ಲಿರುವ ಆಮ್ಲೀಯತೆ ಚರ್ಮದ ಕೊಳೆ ತೆಗೆಯಲು ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಕಾಫಿ ಚರಟಕ್ಕೆ ಸ್ವಲ್ಪ ನೀರು, ತೆಂಗಿನ ಎಣ್ಣೆ ಹಾಕಿ ಬಾಡಿ ಸ್ಕ್ರಬ್ ಮಾಡಿ ದೇಹವನ್ನು ಉಜ್ಜಿ ಸ್ನಾನ ಮಾಡಿದರೆ ಕೊಳೆಯೆಲ್ಲಾ ಹೋಗುತ್ತದೆ.
* ಕಾಫಿಯಲ್ಲಿರುವ ಕೆಫೇನ್ ಮತ್ತು ಡಿಟರ್ಪೆನ್ಸ್ ಕೆಲವು ಕೀಟಗಳಿಗೆ ವಿಷಕಾರಿಯಾಗಿದೆ. ಆದ್ದರಿಂದ ಮನೆಯ ಸುತ್ತಮುತ್ತ ಕಾಫಿ ಚರಟವನ್ನು ಸಿಂಪಡಿಸಿದರೆ ಸೊಳ್ಳೆ, ಜಿಗಣೆ ಮುಂತಾದ ಕೀಟಗಳನ್ನು ದೂರವಿಡಬಹುದು.
* ಸಸ್ಯಗಳಿಗೆ ಹಾಕುವ ಗೊಬ್ಬರಕ್ಕೆ ಕಾಫಿ ಚರಟ ಬೆರೆಸಿದರೆ ಸಸ್ಯಗಳಿಗೆ ಹೆಚ್ಚಿನ ಪೋಷಣೆ ಸಿಗುತ್ತದೆ.
* ಪಾತ್ರೆಗಳಲ್ಲಿ ಗಟ್ಟಿ ಕಲೆಗಳು ಅಂಟಿಕೊಂಡಿದ್ದರೆ, ಅದನ್ನು ಕಾಫಿ ಚರಟ ಬೆರೆಸಿದ ಸೋಪ್ ದ್ರಾವಣದಿಂದ ತಿಕ್ಕಿ ತೊಳೆದರೆ ಸ್ವಚ್ಛವಾಗುತ್ತದೆ.