alex Certify ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!

ಎಲ್ಲರಿಗೂ ಅವರದ್ದೇ ಆದ ಪ್ರಿಯ ತಿನಿಸುಗಳು ಇರುತ್ತವೆ. ಅದನ್ನ ತಿನ್ನೋದು ಅಂದರೆ ನಮಗೆ ಪಂಚಪ್ರಾಣ ಕೂಡ ಹೌದು.

ಆದರೆ ಇಲ್ಲೊಂದು ಮಹಿಳೆ ಮಾತ್ರ ಕಳೆದ 31 ವರ್ಷಗಳಿಂದ ಕೇವಲ ಚಹಾ ಮಾತ್ರ ಕುಡಿದು ಬದುಕಿದ್ದಾಳಂತೆ..!ಆದರೆ ಆಕೆ ಚಹಾ ಮಾತ್ರ ಕುಡಿದು ಬದುಕಿದ್ದರ ಹಿಂದೆ ಒಂದು ದುರಂತ ಕತೆ ಇದೆ. ಈಕೆ 31 ವರ್ಷಗಳ ಕಾಲ ಕೇವಲ ಚಹಾ ಮಾತ್ರ ಕುಡಿದು ಬದುಕಲು ಕಾರಣ ಈಕೆಯ ಪತಿ..!

ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……?

ಹಾಗಾದರೆ ಈಕೆ ಪತಿ ಬಲವಂತದಿಂದ ಚಹ ಕುಡಿಸಿದರಾ ಎಂದು ಭಾವಿಸಿದ್ದಿರಬಹುದು. ಆದರೆ ಇದು ತಪ್ಪು. ಅಥವಾ ಇದೊಂದು ವದಂತಿ ಎಂದುಕೊಂಡಿದ್ದರೂ ಸಹ ನಿಮ್ಮ ಊಹೆ ತಪ್ಪಾಗಿದೆ. ಪತಿಯ ಮರಣದ ನಂತರ ಈ ಮಹಿಳೆ ಆಹಾರ ಹಾಗೂ ನೀರು ಸೇವನೆಯನ್ನು ತ್ಯಜಿಸಿದ್ದಾರೆ. ಹೀಗಾಗಿ ಈಕೆ ಕಳೆದ 31 ವರ್ಷಗಳಿಂದ ಕೇವಲ ಚಹವನ್ನು ಮಾತ್ರ ಕುಡಿಯುತ್ತಾ ಬಂದಿದ್ದಾರೆ.

ಈ ಮಹಿಳೆಯ ಈ ವಿಚಿತ್ರ ಅಭ್ಯಾಸದಿಂದಾಗಿ ಗ್ರಾಮಸ್ಥರೆಲ್ಲ ಈಕೆಗೆ ಚಾಯ್​ವಾಲಿ ಚಾಚಿ ಅಥವಾ ದಾದಿ ಎಂದು ಕರೆಯುತ್ತಾರೆ. ಬಿಹಾರದ ಹಾಜಿಪುರ ನಿವಾಸಿಯಾದ ಕಿರಣ್​ ದೇವಿ ತಮ್ಮ ಈ ವಿಚಿತ್ರ ಅಭ್ಯಾಸದಿಂದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದ್ದಾರೆ.

ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……!

ಕಿರಣ್​ ದೇವಿ ಪತಿ ಉಪೇಂದ್ರ ಸಿಂಗ್​ 31 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಪತಿಯ ಸಾವಿನ ದುಃಖದಿಂದಾಗಿ ಕಿರಣ್​ ದೇವಿ 31 ವರ್ಷದಿಂದ ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸಿಯೇ ಇಲ್ಲ. ಕೇವಲ ಚಹವನ್ನ ಮಾತ್ರ ಸೇವಿಸಿ ಕಿರಣ್​ ಜೀವನ ಸಾಗಿಸುತ್ತಿದ್ದಾರೆ. ಈಗಲೂ ಕೂಡ ಇದೇ ಅಭ್ಯಾಸವನ್ನು ಮುಂದುವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...