
ಸ್ಯಾಂಡಲ್ವುಡ್ ನಲ್ಲಿ ಹಾಸ್ಯ ಕಲಾವಿದನಾಗಿ ಮಿಂಚಿರುವ ಧರ್ಮಣ್ಣ ಕಡೂರು ನಾಯಕ ನಟನಾಗಿ ಅಭಿನಯಿಸುತ್ತಿರುವ ‘ರಾಜಯೋಗ’ ಚಿತ್ರದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಅಣ್ಣ ಬಂದ್ರೆ” ಎಂಬ ಈ ಹಾಡಿಗೆ ರವಿ ಸೊರಗಾವಿ ಮತ್ತು ವೇದಾವತಿ ಧ್ವನಿಯಾಗಿದ್ದು, ಲಿಂಗರಾಜ ಉಚ್ಚಂಗಿದುರ್ಗ ಸಾಹಿತ್ಯ ಬರೆದಿದ್ದಾರೆ.
ಲಿಂಗರಾಜ ಉಚ್ಚಂಗಿದುರ್ಗ ನಿರ್ದೇಶನದ ಈ ಚಿತ್ರವನ್ನು ರಾಮರತ್ನ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಕುಮಾರ ಕಂಠೀರವ ನಿರ್ಮಾಣ ಮಾಡಿದ್ದು, ಧರ್ಮಣ್ಣ ಕಡೂರು ಮತ್ತು ನಿರೀಕ್ಷ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಏಪ್ರಿಲ್ 5ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.