alex Certify ಮಹಿಳಾವಾದಿಗೆ ವರ ಬೇಕಾಗಿದ್ದಾನೆ..! ಇಲ್ಲಿದೆ ಜಾಹೀರಾತಿನ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾವಾದಿಗೆ ವರ ಬೇಕಾಗಿದ್ದಾನೆ..! ಇಲ್ಲಿದೆ ಜಾಹೀರಾತಿನ ಹಿಂದಿನ ಅಸಲಿ ಸತ್ಯ

ಕೆಲ ದಿನಗಳ ಹಿಂದಷ್ಟೇ ದಿನಪತ್ರಿಕೆಯೊಂದರ ವಧು/ವರಾನ್ವೇಷಣೆ ಕಾಲಂನಲ್ಲಿ ಹಾಕಲಾಗಿದ್ದ ಜಾಹೀರಾತೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆಯ್ಕೆಯಿಂದ ಮಹಿಳಾವಾದಿಯಾಗಿರುವ ಶಾರ್ಟ್​ ಹೇರ್​​​ ಹಾಗೂ ಚುಚ್ಚಿಸಿಕೊಂಡಿರುವ (ಕಿವಿ/ಮೂಗಿಗೆ) ವಧುವಿಗೆ ವರ ಬೇಕಾಗಿದ್ದಾನೆ ಎಂಬ ಜಾಹೀರಾತು ಇದಾಗಿತ್ತು. ವಿಚಿತ್ರ ವಿವರಣೆಯನ್ನ ಹೊಂದಿರುವ ಕಾರಣಕ್ಕಾಗಿ ಈ ಜಾಹೀರಾತು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

30 ವರ್ಷ ಪ್ರಾಯದ, ವಿದ್ಯಾಭ್ಯಾಸ ಮಾಡಿರುವ ಹಾಗೂ ಬಂಡವಾಳಶಾಹಿಗಳ ವಿರೋಧಿ ಸಾಮಾಜಿಕ ಕಾರ್ಯಕರ್ತೆಗೆ ಸುಂದರವಾಗಿರುವ 25 ರಿಂದ 28 ವರ್ಷ ಪ್ರಾಯದ ವರ ಬೇಕಾಗಿದ್ದಾನೆ ಎಂತಲೂ ಈ ಜಾಹೀರಾತಿನಲ್ಲಿ ಬರೆಯಲಾಗಿತ್ತು. ಅಲ್ಲದೇ ವರನು ಉದ್ಯಮದಲ್ಲಿ ಒಳ್ಳೆಯ ಲಾಭವನ್ನ ಇರುವ, ಸ್ವಂತ ಬಂಗಲೆ ಹಾಗೂ ಕನಿಷ್ಟ 20 ಎಕರೆ ತೋಟವನ್ನ ಹೊಂದಿರುವ ವರನಿಗೆ ಆದ್ಯತೆ ಎಂದು ಹೇಳಲಾಗಿತ್ತು.

ಕಾಮಿಡಿಯನ್​ ಅದಿತಿ ಮಿತ್ತಲ್​ ಟ್ವಿಟರ್​ನಲ್ಲಿ ಈ ವರಾನ್ವೇಷಣೆಯ ಜಾಹೀರಾತನ್ನ ಹಂಚಿಕೊಂಡಿದ್ದು ಬಳಿಕ ಇದು ವೈರಲ್​ ಆಗಿತ್ತು. ಈ ಟ್ವೀಟ್​ಗೆ ನಟಿ ರಿಚಾ ಚಡ್ಡಾ ಸೇರಿದಂತೆ ಅನೇಕರು ಪ್ರತಿಕ್ರಿಯೆಯನ್ನೂ ನೀಡಿದ್ದರು.

ಆದರೆ ಅನೇಕರು ಈ ಜಾಹಿರಾತಿನ ಸತ್ಯಾಸತ್ಯೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಬಳಿಕ ಬಿಬಿಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಹೇಳಿದೆ.

ಬಿಬಿಸಿ ಜಾಹೀರಾತಿನಲ್ಲಿ ನೀಡಲಾಗಿದ್ದ ಜಿಮೇಲ್​ ವಿಳಾಸವನ್ನ ಸಂಪರ್ಕಿಸಲು ಯತ್ನಿಸಿದೆ. ಈ ಮಹಿಳಾವಾದಿಯನ್ನ ಬಿಬಿಸಿ ಕೊನೆಗೂ ಪತ್ತೆ ಮಾಡಿದೆ. ಆದರೆ ಆಕೆ ತನ್ನ ಹೆಸರನ್ನ ಬಹಿರಂಗಪಡಿಸಲು ಒಪ್ಪಿಲ್ಲ. ಆದರೆ ತಮ್ಮ ಕಾವ್ಯನಾಮ ಸಾಕ್ಷಿ ಎಂದು ಹೇಳಿದ್ದಾರೆ.

ಸಾಕ್ಷಿಯ ಜನ್ಮ ದಿನದ ಪ್ರಯುಕ್ತ ಆಕೆಗೆ ತಮಾಷೆ ಮಾಡುವ ಸಲುವಾಗಿ ಆಕೆಯ ಸಹೋದರ ಶ್ರೀಜನ್​ ಹಾಗೂ ಸ್ನೇಹಿತೆ ದಮಯಂತಿ (ನಿಜವಾದ ಹೆಸರುಗಳಲ್ಲ) ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆಕೆಯ 30ನೇ ವರ್ಷದ ಜನ್ಮದಿನದ ಹಿನ್ನೆಲೆ ಅವಳಿಗೆ ಕಾಟ ನೀಡಲು ಈ ರೀತಿ ಮಾಡಿದ್ದೇವೆ ಎಂದು ಶ್ರೀಜನ್​ ಹೇಳಿದ್ದಾರೆ.

ನನ್ನ ಜನ್ಮದಿನದ ಹಿಂದಿನ ದಿನ ನನಗೆ ಇವರೆಲ್ಲ ಸೇರಿ ಈ ಇಮೇಲ್​ ಅಡ್ರೆಸ್​ ನೀಡಿದರು. ಮೇಲ್​ ಐಡಿ ಪಾಸ್​ವರ್ಡ್ ನೋಡಿದ ಬಳಿಕ ನಾನೇನು ಮಾಡೋದು ಎನ್ನೋದು ನನಗೆ ಹೊಳೆಯಲಿಲ್ಲ. ಬೆಳಗ್ಗೆ ಸುಮಾರಿಗೆ ನನ್ನ ಸಹೋದರ ದಿನ ಪತ್ರಿಕೆಯಲ್ಲಿ ಇವರು ನೀಡಿದ್ದ ಜಾಹೀರಾತನ್ನ ತೋರಿಸಿದ. ನಾವೆಲ್ಲ ಬಿದ್ದು ಬಿದ್ದು ನಕ್ಕೆವು. ಇದೊಂದು ತಮಾಷೆ ಮಾತ್ರ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...