alex Certify ಅರಣ್ಯ ಪ್ರದೇಶದಲ್ಲಿ ಟೋಲ್ ಟ್ಯಾಕ್ಸ್ ಕಲೆಕ್ಟರ್ ಆನೆ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಣ್ಯ ಪ್ರದೇಶದಲ್ಲಿ ಟೋಲ್ ಟ್ಯಾಕ್ಸ್ ಕಲೆಕ್ಟರ್ ಆನೆ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ದೇಶದ ಅರಣ್ಯ ಪ್ರದೇಶಗಳಾದ್ಯಂತ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಸಾಮಾನ್ಯವಾಗಿ ಪರಸ್ಪರ ಕ್ರಿಯೆಗಳಿವೆ. ಈ ನಿದರ್ಶನದಲ್ಲಿ ಮತ್ತೊಂದು ಪ್ರಾಣಿ-ಮಾನವ ಸಂಪರ್ಕವು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕಬ್ಬು ತುಂಬಿದ ವಾಹನಗಳನ್ನು ನಿಲ್ಲಿಸುವ ಆನೆ ಟೋಲ್ ಟ್ಯಾಕ್ಸ್ ಕಲೆಕ್ಟರ್ ನಂತೆ ವರ್ತಿಸುತ್ತಿದೆ. ಕಬ್ಬು ತುಂಬಿದ ಟ್ರಕ್ ಗಳನ್ನು ನಿಲ್ಲಿಸುವ ಆನೆ ಸ್ವಲ್ಪ ಕಬ್ಬನ್ನು ತಿನ್ನುತ್ತದೆ. ಆನೆ ಕಬ್ಬು ತಿನ್ನಲು ಮುಂದಾಗ್ತಿದ್ದಂತೆ ವಾಹನಗಳು ಮುಂದೆ ಚಲಿಸುತ್ತವೆ.

ಸಾಮಾಜಿಕ ಮಾಧ್ಯಮ ಬಳಕೆದಾರರಾದ ಡಾ. ಅಜಯಿತ ಅವರು “ಟೋಲ್ ಟ್ಯಾಕ್ಸ್ ಕಲೆಕ್ಟರ್” ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಕಿರು ಕ್ಲಿಪ್‌ನಲ್ಲಿ, ಆನೆಯೊಂದು ಟ್ರಕ್ ಅನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಅದರಿಂದ ಕಬ್ಬುಗಳನ್ನು ಕಿತ್ತುಕೊಂಡು, ಅವುಗಳನ್ನು ತಿನ್ನುವುದನ್ನು ಕಾಣಬಹುದು.
ಈ ವಿಡಿಯೋ ಭಾರೀ ವೀಕ್ಷಣೆ ಗಳಿಸಿದ್ದು ನೆಟ್ಟಿಗರಿಗೆ ಮುದ ನೀಡಿದೆ.

— Dr. Ajayita (@DoctorAjayita) March 6, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...