
ಶೋಕ್ದಾರ್ ಧನ್ವೀರ್ ಗೌಡ ಅಭಿನಯದ ‘ಕೈವ’ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದು, ‘ವಾಮನ’ ಇನ್ನೇನು ತೆರೆಯ ಮೇಲೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ ‘ಬಂಪರ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಧನ್ವೀರ್ ಗೌಡ ತಮ್ಮ ಮಾಸ್ ಡೈಲಾಗ್ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.
ಧನ್ವೀರ್ ಗೌಡ ಅವರ ಮುಂಬರುವ ಹೊಸ ಚಿತ್ರದ ಮುಹೂರ್ತ ಸಮಾರಂಭ ಫೆಬ್ರವರಿ 2 ರಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ನೆರವೇರಲಿದ್ದು, ಇದರ ಜೊತೆಗೆ ಟೈಟಲ್ ಮೋಶನ್ ಪೋಸ್ಟರ್ ಕೂಡ ಸಂಜೆ 5 ಗಂಟೆಗೆ ರಿಲೀಸ್ ಆಗಲಿದೆ. ಇದುವರೆಗೂ ಈ ಚಿತ್ರಕ್ಕೆ d5 ಎಂಬ ಹೆಸರಿಟ್ಟಿದ್ದು, ಸಿನಿಮಾ ಟೈಟಲ್ ಇದೀಗ ರಿವಿಲ್ ಆಗಲಿದೆ.