alex Certify ʼಅಡುಗೆ ಮನೆʼಯ‌ ಈ ಪದಾರ್ಥಗಳಲ್ಲಿದೆ ʼಆರೋಗ್ಯʼದ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಡುಗೆ ಮನೆʼಯ‌ ಈ ಪದಾರ್ಥಗಳಲ್ಲಿದೆ ʼಆರೋಗ್ಯʼದ ಗುಟ್ಟು

What's the Difference Between an Herb and a Spice? | Britannica

ಡಯಟ್ ಅಂದಾಕ್ಷಣ ನೀವು ತಿನ್ನೋ ಆಹಾರಗಳು ಬೋರಿಂಗ್ ಆಗಿರಬೇಕು ಅಂತೇನಿಲ್ಲ. ಸ್ವಲ್ಪ ಉಪ್ಪು, ಖಾರ, ಹುಳಿಯ ಜೊತೆಗೆ ನೀವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿಮ್ಮ ತಿನಿಸುಗಳ ಸುಗಂಧವನ್ನು ಹೆಚ್ಚಿಸಲು ಕೆಲವೊಂದು ಮಸಾಲೆ ಮತ್ತು ಹರ್ಬ್ಸ್ ಬಳಸಿ.

ಅವುಗಳಿಂದ ಖಾದ್ಯಗಳ ಫ್ಲೇವರ್ ಹೆಚ್ಚುತ್ತದೆ. ಜೊತೆಗೆ ಆರೋಗ್ಯಕ್ಕೂ ಅದು ಒಳ್ಳೆಯದು. ನಿಮ್ಮ ಡಯಟ್ ನಲ್ಲಿ ಬಳಸಲೇಬೇಕಾದ 5 ಪ್ರಮುಖ ಮಸಾಲೆ ಪದಾರ್ಥಗಳು ಮತ್ತು ಹರ್ಬ್ಸ್ ಯಾವುದು ಅಂತಾ ನೋಡೋಣ.

ಶುಂಠಿ : ಪ್ರತಿ ಮನೆಯಲ್ಲೂ ಕಾಣಸಿಗುವ ಮಸಾಲೆ ಪದಾರ್ಥ ಇದು. ಬಿಸಿಬಿಸಿಯಾದ ಶುಂಠಿ ಚಹಾ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಶುಂಠಿಯಲ್ಲಿ ಆರೋಗ್ಯಕ್ಕೆ ಪೂರಕ ಅಂಶಗಳಿವೆ. ತಲೆನೋವು ಮತ್ತು ಋತುಸ್ರಾವದ ನೋವನ್ನು ಕಡಿಮೆ ಮಾಡುತ್ತದೆ. ತಿನಿಸುಗಳಲ್ಲಿ ಶುಂಠಿಯನ್ನು ಬಳಸುವುದರಿಂದ ಅಲ್ಸರ್, ತೂಕ, ಅಜೀರ್ಣ ಕೂಡ ಕಡಿಮೆಯಾಗುತ್ತದೆ.

ದಾಲ್ಚಿನಿ : ಒಂದು ರೀತಿಯ ಸಿಹಿಯಾದ ಪರಿಮಳವುಳ್ಳ ಮಸಾಲೆ ಇದು. ಪ್ರತಿ ಮನೆಯಲ್ಲೂ ಇರಲೇಬೇಕು. ಚಹಾ ಮತ್ತು ಕೇಕ್ ಗೆ ದಾಲ್ಚಿನಿ ಉತ್ತಮ ಫ್ಲೇವರ್ ಕೊಡುತ್ತದೆ. 8 ವಾರಗಳ ಕಾಲ ದಾಲ್ಚಿನಿ ಬಳಸಿದರೆ ಬ್ಲಡ್ ಶುಗರ್ ಲೆವಲ್ ಕಡಿಮೆ ಮಾಡಬಹುದು.

ಕರಿಬೇವು : ಇದು ಅತ್ಯುತ್ತಮ ಸುಗಂಧವುಳ್ಳ ಹರ್ಬ್. ಸಾಮಾನ್ಯವಾಗಿ, ದಾಲ್, ಉಪ್ಪಿಟ್ಟು, ರಸಂ ಎಲ್ಲದಕ್ಕೂ ಕರಿಬೇವು ಬಳಸುತ್ತಾರೆ. ಇದನ್ನು ಹಾಗೇ ತಿನ್ನುವುದರಿಂದ ಉದರ ಬಾಧೆ ಕಡಿಮೆಯಾಗುತ್ತದೆ. ಮಧುಮೇಹ, ಕೂದಲು ಬೆಳ್ಳಗಾಗುವ ಸಮಸ್ಯೆ, ದೃಷ್ಟಿ ಹೀನತೆ, ಲಿವರ್ ಮತ್ತು ಕಿಡ್ನಿ ಸಮಸ್ಯೆಗೆ ಕೂಡ ಕರಿಬೇವು ಒಳ್ಳೆ ಮದ್ದು.

ಬೆಳ್ಳುಳ್ಳಿ : ಬಾಯಲ್ಲಿ ನೀರೂರಿಸುವ ಫ್ಲೇವರ್ ಹೊಂದಿರೋ ಮಸಾಲೆ ಪದಾರ್ಥ ಇದು. ಸೂಪ್, ಉಪ್ಪಿನಕಾಯಿ, ಕರಿ ಹೀಗೆ ವಿವಿಧ ಖಾದ್ಯಗಳ ರುಚಿಯನ್ನು ಬೆಳ್ಳುಳ್ಳಿ ಹೆಚ್ಚಿಸುತ್ತದೆ. ಅಧಿಕ ಮತ್ತು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಸೇವಿಸುವುದು ಉತ್ತಮ. ಕೊಲೆಸ್ಟ್ರಾಲ್, ಕ್ಯಾನ್ಸರ್ ಹಾಗೂ ಹೃದಯದ ತೊಂದರೆಗೂ ಉತ್ತಮ ಮದ್ದು.

ಮೆಂತ್ಯ : ಇದು ಸ್ವಲ್ಪ ಕಹಿಯಾಗಿದ್ರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸ್ವಲ್ಪ ಹುರಿದು ಪುಡಿ ಮಾಡಿ ಹಾಕಿದರೆ ಒಳ್ಳೆ ಟೇಸ್ಟ್ ಕೊಡುತ್ತದೆ. ಮಧುಮೇಹಿಗಳು ಮೆಂತ್ಯ ಸೇವಿಸುವುದು ಉತ್ತಮ. ಇದು ಬ್ಲಡ್ ಶುಗರ್ ಲೆವಲ್ ಕಡಿಮೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...