ನಿಮ್ಮ ತ್ವಚೆಗೆ ಬಳಸಲು ಯಾವ ಹಣ್ಣಿನ ಮಾಸ್ಕ್ ಹೆಚ್ಚು ಸೂಕ್ತ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಅತ್ಯುತ್ತಮ ಉತ್ತರ ಎಂದರೆ ಆಯಾ ಸೀಸನ್ ನಲ್ಲಿ ಸಿಗುವ ಸೀಸನಲ್ ಫ್ರೂಟ್ ಗಳು. ಹೌದು, ತಾಜಾ ಹಣ್ಣಿನ ಮಾಸ್ಕ್ ತಯಾರಿಸಿ ಬಳಸಿ. ಇದರಿಂದ ನಿಮ್ಮ ತ್ವಚೆ ಹೊಳೆಯುವುದನ್ನು ನೋಡಿ.
ಮಾವು ಮತ್ತು ಚಿಯಾ ಹೈಡ್ರೇಟಿಂಗ್ ಮಾಸ್ಕ್ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದೆ, ಇದು ನಿಮ್ಮ ಚರ್ಮವನ್ನು ಆಕರ್ಷಣೀಯವಾಗಿಸುತ್ತದೆ ಮತ್ತು ಪುನಃಶ್ಚೇತನಗೊಳಿಸುತ್ತದೆ.
ಸಬ್ಬಕ್ಕಿ ಮತ್ತು ನಿಂಬೆರಸದಿಂದ ಮಾಡಿದ ಮಾಸ್ಕ್ ಕೂಡಾ ತ್ವಚೆ ರಕ್ಷಣೆಗೆ ಸಹಕಾರಿ. ಇದು ಸೂಕ್ಷ್ಮ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಸಬ್ಬಕ್ಕಿ ಪುಡಿ ಮಾಡಿ ನಿಂಬೆರಸ ಬೆರೆಸಿ. ದಪ್ಪವಾದ ಈ ಮಿಶ್ರಣಕ್ಕೆ ಸಕ್ಕರೆ ಮತ್ತು ಮುಲ್ತಾನಿ ಮಿಟ್ಟಿ ಬೆರೆಸಿ. ಕಣ್ಣಿನ ಭಾಗವನ್ನು ಬಿಟ್ಟು ಉಳಿದಂತೆ ಎಲ್ಲೆಡೆ ಹಚ್ಚಿ ಮಸಾಜ್ ಮಾಡಿ. ಈ ಸ್ಕ್ರಬ್ 10 ರಿಂದ 15 ನಿಮಿಷಗಳ ಕಾಲ ಮುಖದ ಮೇಲೆ ಇರಲಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.