ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 52ನೇ ಮಹೋತ್ಸವದ ಸಂದರ್ಭದಲ್ಲಿ ಅಮೇಜ಼ಾನ್ ಪ್ರೈಂ ವಿಡಿಯೋ ಸೃಷ್ಟಿಸಿರುವ ’ವಾಟ್ ಗೋಸ್ ಇಂಟೂ ಕ್ರಿಯೇಟಿಂಗ್ ಕಲ್ಟ್ ಐಕಾನ್ಸ್’ ಶೋ ಬಿತ್ತರಿಸಿದೆ.
’ಕ್ರಿಯೇಟಿಂಗ್ ಕಲ್ಟ್ ಐಕಾನ್ಸ್: ಇಂಡಿಯಾಸ್ ಓನ್ ಜೇಮ್ಸ್ ಬಾಂಡ್ (007)’ ಮಾಸ್ಕರ್ಕ್ಲಾಸ್ ಬಿತ್ತರಗೊಳ್ಳುವ ವೇಳೆ ಪ್ರಶಸ್ತಿ ವಿಜೇತ ಅಮೇಜ಼ಾನ್ನ ಒರಿಜಿನಲ್ ಸೀರೀಸ್ ’ದಿ ಫ್ಯಾಮಿಲಿ ಮ್ಯಾನ್’ನ ತಾರಾಗಣ ಉಪಸ್ಥಿತವಿತ್ತು. ಈ ಶೋ ಆಕ್ಷನ್, ಫ್ಯಾಮಿಲಿ ಡ್ರಾಮಾ, ಸಸ್ಪೆನ್ಸ್, ಭಾವನೆಗಳು, ಕಾಮಿಡಿಯಂಥ ಬಹು ಆಯಾಮಗಳಿಗೆ ಸೇರುತ್ತದೆ.
ಈ ವೇಳೆ ಮಾತನಾಡಿದ ನಟಿ ಸಮಂತ, ಶೋನಲ್ಲಿ ’ರಾಜಿ’ ಪಾತ್ರದಲ್ಲಿ ಅಭಿನಯಿಸಿದ ಕುರಿತು ಮಾತನಾಡಿ, “ಒಬ್ಬ ನಟಿಯಾಗಿ, ನನಗೆ ಯಾವಾಗಲೂ ಮಿತಿಗಳನ್ನು ವಿಸ್ತರಿಸಿ ಹೊಸ ಭಾವಗಳನ್ನು ಅನ್ವೇಷಿಸಲು ಇಷ್ಟ ಪಡುತ್ತೇನೆ. ಕಲಾವಿದೆಯರು ಸಾಮಾನ್ಯವಾಗಿ ಏಕ ಆಯಾಮದ ಪಾತ್ರಗಳಿಗೆ ಸೀಮಿತವಾಗಿಬಿಡುತ್ತಾರೆ ಈ ಕಾರಣದಿಂದಾಗಿ ನಿಮ್ಮ ಪ್ರದರ್ಶನ ಪದೇ ಪದೇ ಪುನರಾವರ್ತಿತವಾದಂತೆ ಭಾಸವಾಗುತ್ತದೆ.
ಇದು ಮಾಮೂಲಾದ ಭಾವಗಳನ್ನೇ ಆಯ್ದುಕೊಂಡಾಗ ಆಗುತ್ತದೆ. ಆದರೆ ರಾಜಿ ವಿಚಾರದಲ್ಲಿ ಹೇಳುವುದಾದರೆ, ಇದು ಬಹಳ ಭಿನ್ನವಾಗಿದ್ದು ಉತ್ಸಾಹಮಯವಾಗಿದೆ. ಈ ಪಾತ್ರವು ನನಗೆ ಹೊಸ ಆಯಾಮವೊಂದನ್ನು ಅನ್ವೇಷಿಸಲು ಅವಕಾಶ ಕೊಟ್ಟಿದೆ. ನನಗೆ ಹೀಗೆ ಹಿಂದೆ ಆಗಿರಲಿಲ್ಲ. ಈ ಸವಾಲನ್ನು ನನ್ನೊಳಗಿನ ನಟಿಗೆ ಇಲ್ಲವೆನ್ನಲು ಸಾಧ್ಯವಾಗಲಿಲ್ಲ,” ಎಂದು ಹೇಳಿಕೊಂಡಿದ್ದಾರೆ.