alex Certify ಸರಳ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್, ಪರೀಕ್ಷಾ ಪಠ್ಯದಲ್ಲಿ 30% ಕಡಿತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಳ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್, ಪರೀಕ್ಷಾ ಪಠ್ಯದಲ್ಲಿ 30% ಕಡಿತ…!

ರಾಜ್ಯದಲ್ಲಿ ಕೋವಿಡ್ ಆರ್ಭಟ ಜೋರಾಗುತ್ತಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಾರ ಕಮ್ಮಿ ಮಾಡಲು ಸಿದ್ಧತೆ ನಡೆಸಿರುವ ಪಿಯು ಬೋರ್ಡ್, ಸರಳೀಕೃತ ಪಿಯು ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಕೊರೋನಾ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಬಾರಿಯ ಪರೀಕ್ಷೆಯನ್ನ ಸರಳ ಮಾದರಿಯಲ್ಲಿ ನಡೆಸಲು ಮುಂದಾಗಿದೆ.

ನಿನ್ನೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬೆನ್ನಲ್ಲೆ ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಎಲ್ಲಾ ಭಾಗದ ವಿದ್ಯಾರ್ಥಿಗಳನ್ನು ಗಮನಕ್ಕೆ ತೆಗೆದುಕೊಂಡು ಪರೀಕ್ಷೆಗಳನ್ನ ಹೇಗೆ, ಎಲ್ಲಿ ನಡೆಸಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವೇಳೆ ಪರೀಕ್ಷೆಗೆ ಪಠ್ಯ ಕಡಿತ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಕೊರೋನಾ ಕಾರಣದಿಂದ ಗ್ರಾಮೀಣ ಸೇರಿದಂತೆ ಹಲವು ಭಾಗಗಳಲ್ಲಿ ಪೂರ್ಣವಾಗಿ ಪಠ್ಯ ಬೋಧನೆಯಾಗಿಲ್ಲ ಎನ್ನುವ ಅಂಶವನ್ನ ಗಣನೆಗೆ ತೆಗೆದುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ಭಾಷಾ ವಿಷಯದಲ್ಲಿ 30% ಅಷ್ಟು ಪಠ್ಯವನ್ನ ಕಡಿತಗೊಳಿಸಿದ್ದು, 70% ಪಠ್ಯವನ್ನ ಪರೀಕ್ಷೆಗೆ ಸೇರಿಸಲಾಗಿದೆ.

ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಕಾದಿದೆ ಶುಭ ಯೋಗ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಳೀಕೃತ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿ, ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಮಾಡಲು ಇಲಾಖೆ ನಿರ್ಧರಿಸಿದೆ. 30% ಪಠ್ಯ ಕಡಿತದ, ಪರೀಕ್ಷೆಯಲ್ಲಿ ಹೆಚ್ಚಾಗಿ ಬಹು ಆಯ್ಕೆಯ ಪ್ರಶ್ನೆಗಳನ್ನ ನೀಡಲಿದೆ. ದ್ವಿತೀಯ ಪಿಯು ಮಾತ್ರವಲ್ಲ ಪ್ರಥಮ ವರ್ಷದವರ ಪಠ್ಯದಲ್ಲೂ ಕಡಿತ ಮಾಡಲಾಗಿದೆ. ಭಾಷಾ ವಿಷಯದಲ್ಲಿ ಮಾತ್ರ ಪರೀಕ್ಷಾ ಪಠ್ಯ ಕಡಿತವಾಗಿದ್ದು, ಐಚ್ಛಿಕ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಇಲಾಖೆ ಆದೇಶ ಹೊರಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...