alex Certify ‘ಶ್ರಾವಣ’ ಮಾಸ ಶಿವ ಭಕ್ತರಿಗೆ ಪವಿತ್ರ ತಿಂಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶ್ರಾವಣ’ ಮಾಸ ಶಿವ ಭಕ್ತರಿಗೆ ಪವಿತ್ರ ತಿಂಗಳು

ಶ್ರಾವಣ ಮಾಸ ಹಿಂದುಗಳ ಪವಿತ್ರ ತಿಂಗಳು. ಶ್ರಾವಣ ಮಾಸ ಶಿವನಿಗೆ ಮೀಸಲು. ಈ ತಿಂಗಳಲ್ಲಿಯೇ ಸಮುದ್ರ ಮಂಥನ ನಡೆದಿತ್ತಂತೆ. ಭಗವಂತ ಶಿವ, ವಿಷ ಸೇವನೆ ಮಾಡಿದ್ದನಂತೆ. ಹಾಲಾಹಲ ಸೇವನೆ ನಂತ್ರ ಉಗ್ರ ವಿಷವನ್ನು ಶಾಂತಗೊಳಿಸಲು ಭಕ್ತರು ಈ ತಿಂಗಳು ಶಿವನಿಗೆ ಜಲ ಅರ್ಪಿಸುತ್ತಾರೆಂದು ನಂಬಲಾಗಿದೆ.

ಈ ತಿಂಗಳಲ್ಲಿ ಮಾಡುವ ಶಿವನ ಪೂಜೆಯಿಂದ ಅನೇಕ ಲಾಭಗಳಿವೆ. ಮದುವೆಯಾಗದವರು ವಿಶೇಷ ಪೂಜೆಗಳನ್ನು ಮಾಡಿದ್ರೆ ಕಂಕಣ ಭಾಗ್ಯ ಒಲಿದು ಬರುತ್ತದೆ.

ಜಾತಕದಲ್ಲಿ ಆಯಸ್ಸು ಕಡಿಮೆ ಇರುವವರು ಆಯಸ್ಸಿನ ರಕ್ಷಣೆಗಾಗಿ ಕೆಲವೊಂದು ಪೂಜೆಗಳನ್ನು ಮಾಡಬೇಕು.

ಶ್ರಾವಣ ಮಾಸದಲ್ಲಿ ಶನಿ ಪೂಜೆ ಹೆಚ್ಚು ಫಲ ನೀಡುತ್ತದೆ.

ಜಾತಕದಲ್ಲಿ ಕಾಡುವ ಗ್ರಹಣ ದೋಷ, ರಾಹು ದೋಷ ಸೇರಿದಂತೆ ಎಲ್ಲ ದೋಷಗಳು ನಿವಾರಣೆಯಾಗುತ್ತವೆ.

ಶ್ರಾವಣ ಮಾಸದಲ್ಲಿ ನೀರಿನ ಶೇಖರಣೆ ಮಾಡಬೇಕು. ನೀರನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು.

ಈ ತಿಂಗಳು ತರಕಾರಿ ಹಾಗೂ ಎಲೆಗಳ ಸೇವನೆ ಕಡಿಮೆ ಮಾಡಿ.

ಮದ್ಯ ಹಾಗೂ ಮಾಂಸಾಹಾರ ಸೇವನೆಯಿಂದ ದೂರವಿರಿ.

ಆದಷ್ಟು ಪ್ರತಿ ಶ್ರಾವಣ ಮಾಸದ ಸೋಮವಾರ ಉಪವಾಸ ಮಾಡಬೇಕು.

ಶಿವಲಿಂಗಕ್ಕೆ ಪ್ರತಿ ದಿನ ಜಲ, ಬಿಲ್ವ ಪತ್ರೆ ಅರ್ಪಿಸಿ.

ಕನಿಷ್ಠ ಹಾಲನ್ನು ಅರ್ಪಿಸಿ. ತಾಮ್ರದ ಪಾತ್ರೆಯಲ್ಲಿ ಹಾಲನ್ನು ಅರ್ಪಿಸಬೇಡಿ.

ಶಿವಪೂಜೆ ನಂತ್ರವಷ್ಟೇ ಹಣ್ಣು, ಉಪಹಾರ ಸೇವನೆ ಮಾಡಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...