ನವದೆಹಲಿ: ಪ್ರಧಾನಿ ಮೋದಿ ಎಂದಾಕ್ಷಣ ನೆನಪಾಗುವುದು ದೇಶೀಯ ಸ್ಟೈಲ್ ಉಡುಗೆಯಲ್ಲಿ ಮಿಂಚುವ ವ್ಯಕ್ತಿತ್ವ. ಯಾವುದೇ ವಿಶೇಷ ಸಂದರ್ಭವಿದ್ದರೂ ತಪ್ಪದೆಯೇ ಸೂಪರ್ ಆಗಿರುವ ಕುರ್ತಾ, ಪೈಜಾಮ ತೊಟ್ಟು, ಅದರ ಬಣ್ಣಕ್ಕೆ ಹೊಂದಾಣಿಕೆ ಆಗುವ ಸ್ಟೋಲ್ ಧರಿಸುವುದು ಮೋದಿ ವೈಶಿಷ್ಟ್ಯತೆ. ಇದು ಅವರ ಡ್ರೆಸ್ ಸೆನ್ಸ್ ನ ವಿಶೇಷತೆಯೂ ಹೌದು.
ಆ.15ರ ಸ್ವಾತಂತ್ರ್ಯ ದಿನದಂದು ಕೂಡ ಅವರು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ವೇಳೆ ಪ್ರತಿ ವರ್ಷ ವಿಶೇಷ ವಿನ್ಯಾಸದ ಪೇಟಗಳನ್ನು ತೊಟ್ಟು ಆಕರ್ಷಿಸಿದ್ದಾರೆ. ಈ ಬಾರಿ ಅವರು ಕೊಲ್ಹಾಪುರಿ ಪೇಟ ಶೈಲಿಯನ್ನು ಧರಿಸಿದ್ದರು. ಪೇಟದ ತುದಿಯು ಅಡಿಯಿಂದ ಮುಡಿಯವರೆಗೂ ಜೋತುಬಿದ್ದಿತ್ತು. ಪೇಟ ಎದ್ದುಕಾಣಲು ಸಹಾಯಕವಾಗುವಂತೆ ತಿಳಿ ನೀಲಿ ಬಣ್ಣದ ಕುರ್ತಾ ಧರಿಸಿ ಗಮನ ಸೆಳೆದರು. ಇದೇ ರೀತಿ ಹಿಂದಿನ ವರ್ಷಗಳಲ್ಲಿ ಕೂಡ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಧರಿಸಲಾಗುವ ವಿಶೇಷ ಶೈಲಿಯ ಪೇಟಗಳನ್ನು ತೊಟ್ಟು ಮೋದಿ ಗಮನ ಸೆಳೆದಿದ್ದಾರೆ.
ಪುಟ್ಟ ಬಾಲಕನ ಹುಟ್ಟುಹಬ್ಬಕ್ಕೆ ಅನಾಮಿಕರಿಂದ ಹರಿದುಬಂತು ಉಡುಗೊರೆಗಳ ಮಹಾಪೂರ
ಯಾವತ್ತೂ ಕೇಸರಿ ಬಣ್ಣ ಮರೆತಿಲ್ಲ:
ಹಿಂದಿನಿಂದಲೂ ಪೇಟ ತೊಡುವ ಅಭ್ಯಾಸ ಹೊಂದಿರುವ ಪ್ರಧಾನಿ, ಯಾವತ್ತೂ ಕೂಡ ಕೇಸರಿ ಬಣ್ಣವನ್ನು ಮರೆತಿಲ್ಲ. 2020ರಲ್ಲಿ ಅವರು ಕೇಸರಿ ಹಾಗೂ ತಿಳಿ ಹಳದಿ ಬಣ್ಣದ ಪೇಟವನ್ನು ತೊಟ್ಟಿದ್ದರು. ಅದಕ್ಕೆ ಕೇಸರಿ ಅಂಚಿನ ಬಿಳಿ ವಸ್ತ್ರವನ್ನು ಮಾಸ್ಕ್ ನಂತೆ ಧರಿಸಿದ್ದರು.
2019ರಲ್ಲಿ ರಾಜಸ್ಥಾನಿ ಶೈಲಿಯ ಪೇಟವನ್ನು ತೊಟ್ಟಿದ್ದರು. ಕೇಸರಿ, ಹಸಿರು ಬಣ್ಣಗಳ ಮಿಶ್ರಣದೊಂದಿಗೆ ಅರ್ಧ ತೋಳಿನ ಬಿಳಿ ಕುರ್ತಾ ಅವರನ್ನು ಆಕರ್ಷಣೀಯವಾಗಿಸಿದ್ದವು.
2018ರಲ್ಲಿ ಮೋದಿ ಅವರ ಆಯ್ಕೆ ಕೆಂಪು, ಕೇಸರಿ ಬಣ್ಣದ ಪೇಟವಾಗಿತ್ತು.
2017ರಲ್ಲಿ ಹಳದಿ, ಕೆಂಪು, ಕೇಸರಿ ಮಿಶ್ರಿತ ಪೇಟ ಅವರ ಆಯ್ಕೆಯಾಗಿತ್ತು.
2016ರಲ್ಲಿ ತಿಳಿ ಗುಲಾಬಿ, ಕೇಸರಿ, ಹಳದಿ ಮಿಶ್ರಿತ ಬಣ್ಣಗಳ ಪೇಟ ಧರಿಸಿದ್ದರೆ, 2015ರಲ್ಲಿ ಕೇಸರಿ, ಹಸಿರು ಮಿಶ್ರಿತ ಬಣ್ಣಗಳಿದ್ದವು.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಆದಾಗ ಜೋಧಪುರಿ ಶೈಲಿಯ ಅಚ್ಚ ಕೆಂಪು, ತಿಳಿ ಕೇಸರಿ ಬಣ್ಣಗಳನ್ನು ಸೆಲೆಕ್ಟ್ ಮಾಡಿಕೊಂಡಿದ್ದರು.