alex Certify ಪುಟ್ಟ ಬಾಲಕನ ಹುಟ್ಟುಹಬ್ಬಕ್ಕೆ ಅನಾಮಿಕರಿಂದ ಹರಿದುಬಂತು ಉಡುಗೊರೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಹುಟ್ಟುಹಬ್ಬಕ್ಕೆ ಅನಾಮಿಕರಿಂದ ಹರಿದುಬಂತು ಉಡುಗೊರೆಗಳ ಮಹಾಪೂರ

ಅದೇನೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ಖುಷಿಯಾಗಿಡಲು ಅಮ್ಮಂದಿರು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ತನ್ನ ಮುದ್ದು ಮಗನಿಗೆ ಆಟಿಕೆಗಳನ್ನು ಖರೀದಿಸಲು ಸಾಧ್ಯವಾಗದ ತಾಯಿಯೊಬ್ಬರು ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈಕೆಯ ಪೋಸ್ಟ್ ನೋಡಿದ ಅನಾಮಿಕ ಕರುಣಾಮಯಿಗಳು ಬಾಲಕನ ಮೇಲೆ ಅಗಾಧವಾದ ಕಾಳಜಿ ತೋರಿ ಆತನಿಗೆ ಆಟಿಕೆಗಳನ್ನು ಕಳುಹಿಸಿದ್ದಾರೆ.

ತನ್ನ ಮಗನಿಗೆ ಈ ಕರುಣಾಮಯಿ ’ಬರ್ತ್‌ಡೇಸಾಂಟಾ’ಗಳು ಮೇಲಿಂದ ಮೇಲೆ ಉಡುಗೊರೆಗಳನ್ನು ಕಳುಹಿಸಿದ ಕಾರಣ ಆತನ ಬಳಿ ಆಟಿಕೆಗಳ ಗುಡ್ಡವೇ ಸೃಷ್ಟಿಯಾಗಿದೆ ಎಂದು ರೆಡ್ಡಿಟ್ ಬಳಕೆದಾರ ಮಹಿಳೆ ನೆಟ್ಟಿಗರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

“ರೆಡ್ಡಿಟ್‌ನಿಂದಾಗಿ ನನ್ನ ಮಗನ ಹುಟ್ಟುಹಬ್ಬ ಭಾರೀ ಅದ್ಧೂರಿಯಾಗಿ ಸಾಗಿದೆ. ನೀವೆಲ್ಲಾ ಹೃದಯವಂತರು” ಎಂದು ಈ ಮಹಿಳೆ ಧನ್ಯತಾಭಾವ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...