
ಪ್ರತಿಯೊಬ್ಬರ ದೇಹಕ್ಕೆ ಜೀವಸತ್ವಗಳು, ಅಗತ್ಯವಾಗಿಬೇಕು. ಇದರಿಂದ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬಹುದು. ಆದರೆ ಈ ವಿಟಮಿನ್ ಗಳಲ್ಲಿ ಕೊರತೆಯಾದರೆ ದೇಹದಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಕೆಲವರು ತಮ್ಮ ಪಾದಗಳಲ್ಲಿ ಸುಡುವ ವೇದನೆಯನ್ನು ಅನುಭವಿಸುತ್ತಾರೆ. ಅದಕ್ಕೆ ಈ ವಿಟಮಿನ್ ಕೊರತೆಯೇ ಕಾರಣವಂತೆ.
ಹೌದು, ದೇಹದಲ್ಲಿ ವಿಟಮಿನ್ ಬಿ ಕೊರತೆಯಾದರೆ ಪಾದಗಳಲ್ಲಿ ಸುಡುವ ವೇದನೆ ಸಮಸ್ಯೆ ಕಾಡುತ್ತದೆಯಂತೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರ ಸೇವಿಸಿ.
ಮೊಟ್ಟೆ, ಮೊಸರು, ಓಟ್ಸ್, ಚೀಸ್, ಹಾಲು, ಮುಂತಾದವುಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆಯಂತೆ. ಹಾಗಾಗಿ ಪ್ರತಿದಿನ ಆಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.
ಹಾಗೇ ಪಾದಗಳ ಸುಡುವ ವೇದನೆಯನ್ನು ಕಡಮೆ ಮಾಡಲು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಮುಳುಗಿಸಿಡಿ. ಇದರಿಂದ ಪಾದಗಳಿಗೆ ವಿಶ್ರಾಂತಿ ಸಿಗುತ್ತದೆಯಂತೆ.