ಸಲ್ಮಾನ್ ಖಾನ್ ಅವರ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್‌ಗಳು ಅಭಿಮಾನಿಗಳಲ್ಲಿ ಬಹಳ ಜನಪ್ರಿಯವಾಗಿವೆ. ಈಗ, ಅವರು ಅಂತಹದ್ದೇ ಒಂದು ಹಿಟ್ ಡ್ಯಾನ್ಸ್ ಸ್ಟೆಪ್ ಮರುಸೃಷ್ಟಿಸಲು ಪ್ರಯತ್ನಿಸಿ ಸುದ್ದಿಯಾಗುತ್ತಿದ್ದಾರೆ. ಏಕೆಂದರೆ ಸಲ್ಮಾನ್ ತನ್ನದೇ ಡ್ಯಾನ್ಸ್ ಸ್ಟೆಪ್ ಮರುಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ.
ಹೌದು ಸಲ್ಮಾನ್ ಖಾನ್ ಸಧ್ಯ ದಬಂಗ್ ಟೂರ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಟೂರ್ ನ ಒಂದು ಈವೆಂಟ್, ದುಬೈ ಎಕ್ಸ್‌ಪೋ 2022 ನಲ್ಲಿ ನಡೆದಿದೆ. ಇದರಲ್ಲಿ ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಅವರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಭಾಯಿ ತಮ್ಮ ಹಿಟ್ ಸ್ಟೆಪ್ಸ್ ಗಳನ್ನು ರಿಕ್ರಿಯೇಟ್ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್ ಕಹಾನಿ’
ಸಲ್ಮಾನ್ ಖಾನ್ ಅವರು ‘ಕಿಕ್’ ಸಿನಿಮಾದ ‘ಜುಮ್ಮೆ ಕೆ ರಾತ್ ಹೈ’ ಹಾಡಿಗೆ ಪೂಜಾ ಹೆಗ್ಡೆ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಅದರಲ್ಲಿ ಒಂದು ಸ್ಟೆಪ್ ಇದೆ. ಸಲ್ಲು, ಜಾಕ್ವೆಲಿನ್ ಫರ್ನಾಂಡಿಸ್ ಅವರ ಸ್ಕರ್ಟ್ ತುದಿಯನ್ನು ಅವರು ಬಾಯಲ್ಲಿ ಕಚ್ಚಿಕೊಂಡು ಡ್ಯಾನ್ಸ್ ಮಾಡಿದ್ದರು. ಈಗ ಅದೇ ಸ್ಟೆಪ್ ಅನ್ನು ಪೂಜಾ ಹೆಗ್ಡೆ ಜೊತೆ ಮಾಡಲು ಹೋಗಿ ಸಲ್ಲು ವಿಫಲರಾಗಿದ್ದಾರೆ. ಆದರೂ ಈ ಸಂದರ್ಭವನ್ನು ಸಲ್ಮಾನ್ ಖಾನ್ ನಿಭಾಯಿಸಿದ ರೀತಿಗೆ ಒಂದು ಕಡೆಯಿಂದ ಮೆಚ್ಚುಗೆ ಮತ್ತೊಂದು ಕಡೆಯಿಂದ ಟ್ರೋಲ್ ವ್ಯಕ್ತವಾಗಿದೆ.
ಸಧ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಸಲ್ಮಾನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಈ ವಿಡಿಯೋ ಟ್ರೋಲ್ ಸಹ ಆಗುತ್ತಿದೆ.
https://twitter.com/SalmanSajidBha6/status/1497691966720471041?ref_src=twsrc%5Etfw%7Ctwcamp%5Etweetembed%7Ctwterm%5E1497691966720471041%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fentertainment%2Fsalman-khan-s-dance-fail-at-da-bangg-tour-trolled-for-creepiness-2796172