
ಭಾರತೀಯ ಸೇನಾಧಿಕಾರಿಗಳು ಮ್ಯಾನ್ ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿ ಸಹಾಯದಿಂದ ಭಯೋತ್ಪಾದಕರು ಅಡಗಿ ಕೂತಿದ್ದ ಮನೆಯನ್ನು ಹೊತ್ತಿ ಉರಿಯುವಂತೆ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಮನೆಯಲ್ಲಿ ಎಷ್ಟು ಮಂದಿ ಭಯೋತ್ಪಾದಕರು ಅಡಗಿ ಕುಳಿತಿದ್ದರು ಹಾಗೂ ಈ ಘಟನೆಯು ಯಾವ ಸ್ಥಳದಲ್ಲಿ ನಡೆದಿದೆ ಅನ್ನೋದಕ್ಕೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ಶ್ರೀಶ ತ್ರಿಪಾಠಿ ಎಂಬವರು ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಪೆಟ್ರೋಲ್ಗೆ ಸಬ್ಸಿಡಿ ನೀಡಿ ಯಾರೂ ಬೇಕಿದ್ದರೂ ಲೀಟರ್ಗೆ 10 ರೂಪಾಯಿ ಮಾಡಿ ನೀಡಬಹುದು. ಆದರೆ ಭಯೋತ್ಪಾದಕರ ಹುಟ್ಟಡಗಿಸುವ ಇಂತಹ ವಿಡಿಯೋಗಳನ್ನ ಯಾರಿಂದಾದರೂ ನೀಡಲು ಸಾಧ್ಯವಿದೆಯೇ..? ಇದೇ ನವ ಭಾರತ..! ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯ ಅಡಿಯಲ್ಲಿ ಯಾವ ಮನೆಯಲ್ಲಿ ಭಯೋತ್ಪಾದಕರು ಅಡಗಿದ್ದರೋ ಅದೇ ಮನೆಯನ್ನ ಮ್ಯಾನ್ ಪೋರ್ಟಬಲ್ ಆ್ಯಂಟಿ ಟ್ಯಾಂಕ್ ಗೈಡೆಟ್ ಮಿಸೈಲ್ ಬಳಸಿ ಉಡೀಸ್ ಮಾಡಲಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
https://twitter.com/i/status/1417939161953103872